ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾಳಗ: ಹೆಣ್ಣು ಹುಲಿ ನೇತ್ರಾವತಿ ಸಾವು

Prasthutha|

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ 6 ವರ್ಷದ ಗಂಡು ಹುಲಿ ‘ರೇವಾ’ ಹಾಗೂ ನೇತ್ರಾವತಿ ನಡುವೆ ಕಾಳಗ ನಡೆದು, ಹೆಣ್ಣುಹುಲಿ ‘ನೇತ್ರಾವತಿ’ ಬುಧವಾರ ಮೃತಪಟ್ಟಿದೆ.

- Advertisement -


ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನದ 15 ವರ್ಷ ಪ್ರಾಯದ ಹೆಣ್ಣುಹುಲಿ ‘ನೇತ್ರಾವತಿ’ ಬುಧವಾರ ಮೃತಪಟ್ಟಿದೆ. ಕಳೆದ ಭಾನುವಾರ (ಜೂನ್ 4 ರಂದು) ಜೈವಿಕ ಉದ್ಯಾನದ 6 ವರ್ಷದ ಗಂಡು ಹುಲಿ ‘ರೇವಾ’ ಹಾಗೂ ನೇತ್ರಾವತಿ ನಡುವೆ ಕಾಳಗ ಏರ್ಪಟ್ಟಿತ್ತು. ಈ ವೇಳೆ ನೇತ್ರಾವತಿ ಗಾಯಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಜಗಳವನ್ನು ಹತೋಟಿಗೆ ತಂದಿದ್ದರು. ಆದರೆ, ಬುಧವಾರ ಬೆಳಗ್ಗೆ ಹೆಣ್ಣು ಹುಲಿ ನೇತ್ರಾವತಿ ಮೃತಪಟ್ಟಿದೆ.

Join Whatsapp
Exit mobile version