Home Uncategorized ಕೊಡಗು: ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ: ಭಯಭೀತರಾದ ಕಾರ್ಮಿಕರು

ಕೊಡಗು: ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ: ಭಯಭೀತರಾದ ಕಾರ್ಮಿಕರು

ಸಿದ್ದಾಪುರ: ಕಾಫಿ ತೋಟದಲ್ಲಿ ಹುಲಿ ಕಾಣಿಸಿಕೊಂಡ ಪರಿಣಾಮ ಕಾರ್ಮಿಕರು ಭಯಬೀತರಾಗಿ ಕೆಲಸ ನಿಲ್ಲಿಸಿ ಮನೆಗೆ ತೆರಳಿರುವ ಘಟನೆ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರ್ಗೊಲ್ಲಿಯಲ್ಲಿ ನಡೆದಿದೆ.


ಶುಕ್ರವಾದ ದಿನ ಎಂದಿನಂತೆ ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಹುಲಿಯೊಂದು ಪ್ರತ್ಯಕ್ಷಗೊಂಡಿದೆ. ಇದರಿಂದ ಮಹಿಳೆಯರು ಸೇರಿದಂತೆ ತೋಟ ಕಾರ್ಮಿಕರು ಭಯದಿಂದ ತೋಟದಿಂದ ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ. ಕಾಫಿ ತೋಟದಲ್ಲಿ ಹುಲಿ ನಡೆದಾಡುವುದನ್ನು ಕಾರ್ಮಿಕನೋರ್ವ ಮೊಬೈಲ್ ನಲ್ಲಿ ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ.

ಕಾಫಿ ತೋಟದಲ್ಲಿರುವ ಹುಲಿಯನ್ನು ಕೂಡಲೇ ಸೆರೆ ಹಿಡಿದು ಅರಣ್ಯಕ್ಕೆ ಬಿಡಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Join Whatsapp
Exit mobile version