Home ಟಾಪ್ ಸುದ್ದಿಗಳು ಒಂದೇ ಕುಟುಂಬದ ಮೂವರು ಮಹಿಳೆಯರು ನೇಣಿಗೆ ಶರಣು

ಒಂದೇ ಕುಟುಂಬದ ಮೂವರು ಮಹಿಳೆಯರು ನೇಣಿಗೆ ಶರಣು

ಚಿಕ್ಕಮಗಳೂರು: ಒಂದೇ ಮನೆಯಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ.


ಮೃತರನ್ನು ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದ ಸುಧಾಕರ್ ಎಂಬುವರ ಕುಟುಂಬದ ಮೂವರು ಸದಸ್ಯರಾದ ವೀಣಾ (49), ಶಾರದಾ (70), ಶ್ರಾವ್ಯಾ(16) ಎಂದು ತಿಳಿದುಬಂದಿದೆ.


ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp
Exit mobile version