Home ಟಾಪ್ ಸುದ್ದಿಗಳು ಶಾಲೆಗೆ ಹೋದ ಮೂವರು ಬಾಲಕಿಯರು ನಾಪತ್ತೆ

ಶಾಲೆಗೆ ಹೋದ ಮೂವರು ಬಾಲಕಿಯರು ನಾಪತ್ತೆ

ಬೆಂಗಳೂರು: ಶಾಲೆಗೆ ಹೋದ ಮೂವರು ಶಾಲಾ ಬಾಲಕಿಯರು ನಾಪತ್ತೆಯಾದ ಘಟನೆ ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಕ್ತೀಶ್ವರಿ (15), ವರುಣಿಕಾ (16), ನಂದಿನಿ(15) ನಾಪತ್ತೆಯಾದ ಬಾಲಕಿಯರು. ಕಳೆದ ಸೆ.6ರಂದು ಪ್ರಾಮನೆಡ್ ರಸ್ತೆಯಲ್ಲಿರುವ ಸೈಂಟ್​ ಜೋಸೆಫ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಿಂದ ಬಾಲಕಿಯರು ನಾಪತ್ತೆಯಾಗಿದ್ದಾರೆ. ಕಾಣೆಯಾಗಿ 9 ದಿನಗಳಿಂದ  ಎಷ್ಟೇ ಹುಡುಕಾಡಿದರೂ ಬಾಲಕಿಯರು ಪತ್ತೆಯಾಗಿಲ್ಲ. ಶಾಲಾ ಸಿಬ್ಬಂದಿ ಸರಿಯಾಗಿ ಉತ್ತರ ಕೊಡುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಪುಲಕೇಶಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮತ್ತೊಂದೆಡೆ ಮನೆಯಲ್ಲಿ ಸಮಸ್ಯೆಯಿದೆ ಓದಲು ಇಷ್ಟವಿಲ್ಲ ಹಾಗಾಗಿ ಮನೆ ಬಿಟ್ಟು ಹೋಗುತ್ತಿದ್ದೇವೆ ಎಂದು ಬಾಲಕಿಯರು ಪತ್ರ​​ ಬರೆದು ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಬಾಲಕಿಯರ ಪತ್ತೆಗೆ ತೀವ್ರ ಶೋಧ ಕೈಗೊಂಡಿದ್ದಾರೆ.

Join Whatsapp
Exit mobile version