Home ಕರಾವಳಿ ಮಂಗಳೂರು| ಅರ್ಧದಲ್ಲೇ ಕೆಟ್ಟು ನಿಂತ ಮಿನಿ ವಿಧಾನಸೌಧದ ಲಿಫ್ಟ್ : ಮೂವರ ರಕ್ಷಣೆ

ಮಂಗಳೂರು| ಅರ್ಧದಲ್ಲೇ ಕೆಟ್ಟು ನಿಂತ ಮಿನಿ ವಿಧಾನಸೌಧದ ಲಿಫ್ಟ್ : ಮೂವರ ರಕ್ಷಣೆ

ಮಂಗಳೂರು : ಮಿನಿವಿಧಾನಸೌಧದ ಲಿಫ್ಟ್​ನಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಳಗ್ಗೆ 10.30ಕ್ಕೆ ಈ ಘಟನೆ ನಡೆದಿದೆ. ಮಿನಿ ವಿಧಾನಸೌಧದಲ್ಲಿ ಕೆಲಸಕ್ಕೆಂದು ಬಂದಿದ್ದ ಮೂವರು ಲಿಫ್ಟ್​ ಹತ್ತಿದ್ದರು. ಹಿರಿಯ ಮಹಿಳೆ ಮತ್ತು ಇಬ್ಬರು ಹಿರಿಯ ಪುರುಷರು ಲಿಫ್ಟ್​ನಲ್ಲಿ ತೆರಳಿದ್ದರು. ಲಿಫ್ಟ್​​ ಮೇಲೇರಿದ ಸ್ವಲ್ಪ ಕ್ಷಣದಲ್ಲಿ ನಿಂತುಕೊಂಡಿತ್ತು.

ಲಿಫ್ಟ್ ನಲ್ಲಿ ಮೂವರು ಸಿಲುಕಿಕೊಂಡು ಗಾಬರಿಗೊಂಡಿದ್ದರು. ಈ ಹಿನ್ನೆಲೆ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಲಿಫ್ಟ್​ನಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ. ತಾಂತ್ರಿಕ ದೋಷದಿಂದ ಲಿಫ್ಟ್​ ಕೆಟ್ಟಿರಬಹುದೆಂದು ಶಂಕಿಸಲಾಗಿದೆ.

Join Whatsapp
Exit mobile version