Home ಟಾಪ್ ಸುದ್ದಿಗಳು ಮಂಕಿಪಾಕ್ಸ್ ಕಂಡು ಬಂದ ಪ್ರತಿ ಐವರಲ್ಲಿ ಮೂವರು ಸಲಿಂಗ ಕಾಮಿಗಳು: ವಿಶ್ವ ಆರೋಗ್ಯ ಸಂಸ್ಥೆ

ಮಂಕಿಪಾಕ್ಸ್ ಕಂಡು ಬಂದ ಪ್ರತಿ ಐವರಲ್ಲಿ ಮೂವರು ಸಲಿಂಗ ಕಾಮಿಗಳು: ವಿಶ್ವ ಆರೋಗ್ಯ ಸಂಸ್ಥೆ

ಬೆಂಗಳೂರು: ಮಂಕಿಪಾಕ್ಸ್ ಕಂಡು ಬಂದ ಪ್ರತಿ ಐವರಲ್ಲಿ ಮೂವರು ಸಲಿಂಗ ಕಾಮಕ್ಕೆ ಒಳಗಾದವರು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದೆ.


ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ವರ್ಷ 3,200ಕ್ಕಿಂತ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಡಬ್ಲ್ಯುಎಚ್ ಒ ಹೇಳಿದೆ. ಈ ಹಿನ್ನೆಲೆಯಲ್ಲಿ ಡಬ್ಲ್ಯುಎಚ್ ಒ ಮತ್ತೊಂದು ಅಚ್ಚರಿ ಮಾಹಿತಿ ನೀಡಿದ್ದು, ಮಂಕಿಪಾಕ್ಸ್ ಕಂಡು ಬಂದಿರುವವರು ಬಹುತೇಕರು ಮಧ್ಯವಯಸ್ಸಿನವರಾಗಿದ್ದಾರೆ. ಅಲ್ಲದೇ ಇವರಲ್ಲಿ ಬಹುತೇಕರು ಪುರುಷರೇ ಆಗಿದ್ದಾರೆ. ಇನ್ನೂ ವಿಚಿತ್ರವೆಂದರೆ ಈ ಖಾಯಿಲೆ ಕಾಣಿಸಿಕೊಂಡ ಪ್ರತಿ ಐವರಲ್ಲಿ ಮೂವರು, ಪುರುಷ ಮತ್ತು ಪುರುಷ ಲೈಂಗಿಕ ಸಂಪರ್ಕ ಮಾಡಿರುವವರು ಎಂದು ಡಬ್ಲ್ಯುಎಚ್ ಒ ಅಧ್ಯಯನ ವರದಿ ಬಿಡುಗಡೆ ಮಾಡಿದೆ.


ಪಶ್ಚಿಮ ಮತ್ತು ಮಧ್ಯ ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ‘ಮಂಕಿಪಾಕ್ಸ್’ ಪ್ರಕರಣಗಳು ಮೇ ತಿಂಗಳಿನಿಂದ ಈಚೆಗೆ ಇತರ ದೇಶಗಳಲ್ಲಿಯೂ ಉಲ್ಬಣಗೊಂಡಿವೆ. ಹೆಚ್ಚಾಗಿ ಪಶ್ಚಿಮ ಯುರೋಪ್ ನಲ್ಲಿ ಪತ್ತೆಯಾಗುತ್ತಿವೆ.
ದುಬೈಯಿಂದ ಕೇರಳಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ನಿನ್ನೆಯಷ್ಟೇ ‘ಮಂಕಿಪಾಕ್ಸ್’ ತಗುಲಿರುವುದು ಭಾರತದಲ್ಲಿ ಖಾತರಿಯಾಗಿತ್ತು. ದೇಶದಲ್ಲಿ ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ ಕೇರಳದ ಕೊಲ್ಲಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ದೃಢಪಟ್ಟಿತ್ತು.

https://twitter.com/ViralNewsNYC/status/1548805251192524800?s=20&t=tyZ-h7MxbWVWQjDJjxDz-g
Join Whatsapp
Exit mobile version