ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಬಹೇರಿ ಕಿಚ್ಚಾ ನದಿಯಲ್ಲಿ ಮೂವರು ಮುಸ್ಲಿಮ್ ಬಾಲಕರ ಮೃತದೇಹ ಪತ್ತೆಯಾಗಿದ್ದು, ಇವರನ್ನು ಕೊಲೆ ಮಾಡಿ ನದಿಗೆ ಎಸೆಯಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಮೃತದೇಹಗಳಲ್ಲಿ ಕಾಣುವ ಗಾಯದ ಗುರುತುಗಳು ಕೊಲೆ ನಡೆಸಿರುವುದನ್ನು ಸ್ಪಷ್ಟಪಡಿಸಿತ್ತದೆ ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ. ಒಂದೇ ಕುಟುಂಬದ ಸದಸ್ಯರಾದ ಸಮೀನ್ ಅಲಿ(16), ಮೊಹಮ್ಮದ್ ಔಸಾಫ್ (18) ಮತ್ತು ಸೈಯದ್ (16) ಅವರ ಮೃತದೇಹಗಳು ನದಿಯಲ್ಲಿ ಪತ್ತೆಯಾಗಿದೆ.
ಮೃತದೇಹದ ಮೇಲೆ ತೀವ್ರ ಗಾಯಗಳಿವೆ. ಕುತ್ತಿಗೆ ಮುರಿಯಲ್ಪಟ್ಟ ಸ್ಥಿತಿಯಲ್ಲಿದ್ದು, ಗುರುತು ಸಿಗದಂತೆ ವಿರೂಪಗೊಂಡಿದೆ ಎಂದು ಸಂಬಂಧಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಲಕರು ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಬರೇಲಿ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವೀಡಿಯೋ ವೀಕ್ಷಿಸಿ…..
ತನ್ನ ಸಹೋದರ ಮತ್ತು ಸ್ನೇಹಿತರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಲ್ಲ. ಅವರನ್ನು ಕೊಲೆ ಮಾಡಲಾಗಿದೆ ಎಂದು ಮೃತಪಟ್ಟ ಸಮೀನ್‌ನ ಸಹೋದರ ಶಾದಾಬ್ ಮಾಧ್ಯಮಗಳಿಗೆ ತಿಳಿಸಿದ್ದಾನೆ.