Home ಟಾಪ್ ಸುದ್ದಿಗಳು ಸಿಗ್ನಲ್ ದುರಸ್ತಿ ವೇಳೆ ರೈಲು ಡಿಕ್ಕಿ: ಮೂವರು ಮೃತ್ಯು

ಸಿಗ್ನಲ್ ದುರಸ್ತಿ ವೇಳೆ ರೈಲು ಡಿಕ್ಕಿ: ಮೂವರು ಮೃತ್ಯು

ಮುಂಬೈ: ರೈಲ್ವೆ ಸಿಗ್ನಲ್ ದುರಸ್ತಿ ಮಾಡುತ್ತಿದ್ದ ಕಾರ್ಮಿಕರಿಗೆ ಮತ್ತೊಂದು ಹಳಿಯಲ್ಲಿ ಸಾಗುತ್ತಿದ್ದ ರೈಲು ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯ್ ರಸ್ತೆ ಮತ್ತು ನೈಗಾಂವ್ ನಿಲ್ದಾಣಗಳ ನಡುವೆ ನಡೆದಿದೆ.


ಮೃತರನ್ನು ಮುಖ್ಯ ಸಿಗ್ನಲಿಂಗ್ ಇನ್ಸ್ಪೆಕ್ಟರ್ ವಾಸು ಮಿತ್ರ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ ಅಧಿಕಾರಿ ಸೋಮನಾಥ ಉತ್ತಮ್ ಲಂಬುಟ್ರೆ, ಸಹಾಯಕ ಸಚಿನ್ ವಾಂಖೆಡೆ ಎಂದು ಗುರುತಿಸಲಾಗಿದೆ.


ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಘಟನಾ ಸಂಬಂಧ ತನಿಖೆ ನಡೆಸಲು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಆದೇಶಿಸಿದೆ.

Join Whatsapp
Exit mobile version