Home ಟಾಪ್ ಸುದ್ದಿಗಳು ಭೀಕರ ರಸ್ತೆ ಅಪಘಾತ: ಧಾರಾವಾಹಿ ನಟಿ ಸೇರಿ ಮೂವರು ಸಾವು

ಭೀಕರ ರಸ್ತೆ ಅಪಘಾತ: ಧಾರಾವಾಹಿ ನಟಿ ಸೇರಿ ಮೂವರು ಸಾವು

ಹೈದರಾಬಾದ್:  ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕಿರಿಯ ಕಲಾವಿದರು ಹಾಗೂ ಓರ್ವ ಬ್ಯಾಂಕ್ ಉದ್ಯೋಗಿ ಸ್ಥಳದಲ್ಲೇ  ಮೃತಪಟ್ಟ  ಘಟನೆ ಶನಿವಾರ ಬೆಳಗ್ಗಿನ ಜಾವ ಗಾಚಿಬೌಲಿಯಲ್ಲಿ ನಡೆದಿದೆ.

ಮಾನಸ ಎಂ (21) ಮತ್ತು ಮಾನಸ ಎನ್ (23) ಮತ್ತು ಬ್ಯಾಂಕ್ ಉದ್ಯೋಗಿ ಅಬ್ದುಲ್ ರಹೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಿರಿಯ ಕಲಾವಿದ ಸಾಯಿ ಸಿಧು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಬ್ದುಲ್ ರಹೀಮ್ ಕಾರು ಚಲಾಯಿಸುತ್ತಿದ್ದರು. ಕಾರು ಅತಿವೇಗದಲ್ಲಿದ್ದರಿಂದ ಸ್ಟೀರಿಂಗ್ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಪೊಲೀಸರು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

Join Whatsapp
Exit mobile version