Home ಟಾಪ್ ಸುದ್ದಿಗಳು ಕಾರು ಪಲ್ಟಿ: ಬಿಜೆಪಿ ಶಾಸಕ ಸಹಿತ ಮೂವರಿಗೆ ಗಾಯ

ಕಾರು ಪಲ್ಟಿ: ಬಿಜೆಪಿ ಶಾಸಕ ಸಹಿತ ಮೂವರಿಗೆ ಗಾಯ

ಮುಂಬೈ: ಕಾರೊಂದು ಸೇತುವೆಯ ಮೇಲಿಂದ ಪಲ್ಟಿಯಾಗಿ 30 ಅಡಿ ಆಳಕ್ಕೆ ಬಿದ್ದು ಮಹಾರಾಷ್ಟ್ರದ ಬಿಜೆಪಿ ಶಾಸಕ ಗಾಯಗೊಂಡಿರುವ ಘಟನೆ ಫಾಲ್ಟನ್’ನಲ್ಲಿ ನಡೆದಿದೆ.


ಜಯಕುಮಾರ್ ಗೋರೆ ತಮ್ಮ ನಿವಾಸ ಸತ್ರಾದಿಂದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಫಾಲ್ಟನ್ ಬಳಿ ಬರುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.


ಘಟನೆಯಲ್ಲಿ ಜಯಕುಮಾರ್ ಗೋರೆ ಸಹಿತ 3 ಅಂಗರಕ್ಷಕರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Join Whatsapp
Exit mobile version