Home ಟಾಪ್ ಸುದ್ದಿಗಳು ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಜೀವ ದಹನ: ಉನ್ನತ ಮಟ್ಟದ ತನಿಖೆಗೆ SDPI ಆಗ್ರಹ

ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಜೀವ ದಹನ: ಉನ್ನತ ಮಟ್ಟದ ತನಿಖೆಗೆ SDPI ಆಗ್ರಹ

ತುಮಕೂರು: ಕುಪ್ರಸಿದ್ಧ ನಕಲಿ ಚಿನ್ನದ ವಂಚನಾ ಜಾಲದಿಂದ ತುಮಕೂರಿನಲ್ಲಿ ನಡೆದಿರುವ ಮೂವರನ್ನು ಸುಟ್ಟು ಕೊಂದಿರುವ ಘೋರ ಘಟನೆಯನ್ನು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷ ಖಂಡಿಸಿ  ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್‌. ಭಾಸ್ಕರ್‌ ಪ್ರಸಾದ್‌ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

 ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್ ಭಾಸ್ಕರ್ ಪ್ರಸಾದ್ “ತುಮಕೂರಿನಲ್ಲಿ ನಡೆದ ಘಟನೆಯು ಆತಂಕಕಾರಿ, ಇಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮೃತರು ಸುಮಾರು 60 ಲಕ್ಷ ರೂಪಾಯಿಗಳನ್ನು ತಂದಿದ್ದು ಪೋಲಿಸರು FIR ನಲ್ಲಿ‌ ಕೇವಲ 6 ಲಕ್ಷ ಎಂದು‌‌ ಹೇಳಿದ್ದು ನಮಗೆ ಅನುಮಾನಾಸ್ಪದವಾಗಿದೆ. ಈ‌ ಜಾಲಕ್ಕೆ ಪೋಲಿಸರು ಕೂಡ ಶಾಮೀಲಾಗಿರುವಂತದ್ದು ಎದ್ದು ಕಾಣುತ್ತಿದೆ” ಎಂದರು.

   ಇನ್ನೂ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ ಮಾತಾನಾಡಿ “ಕೊಲೆಗಾರರಿಗೆ ತಲಾ 3‌ ಕೆಜಿ ಚಿನ್ನ ಕೊಡುವ ಭರವಸೆ ನೀಡಿ ಕೇವಲ 6 ಲಕ್ಷ ರೂಪಾಯಿಗೋಸ್ಕರ ಮೂರು ಮಂದಿಯನ್ನು ಕೊಲೆ ಮಾಡಲು ಸಾಧ್ಯವಿಲ್ಲ, ಇದರೆ ಹಿಂದೆ ದೊಡ್ಡ ಷಡ್ಯಂತ್ರವಿದೆ. ಈ ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಆದೇಶಸಿಬೇಕು” ಎಂದು ಒತ್ತಾಯಿಸಿದರು.

  ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ದ.ಕ ಜಿಲ್ಲಾ ನಾಯಕ‌ ನಿಸಾರ್ ಕುದ್ರಡ್ಕ ಎಸ್‌ಡಿಪಿಐ ತುಮಕೂರು ಜಿಲ್ಲಾಧ್ಯಕ್ಷರಾದ ಉಮ್ರುದ್ದೀನ್, ಜಿಲ್ಲಾ ಉಪಾಧ್ಯಕ್ಷರಾದ ಅಲೀಮುಲ್ಲಾ ಷರೀಫ್, ಜಿಲ್ಲಾ ಸಮಿತಿ ಸದಸ್ಯರಾದ ಮಕ್ತಿಯಾರ್ ಅಹ್ಮದ್ ಉಪಸ್ಥಿತರಿದ್ದರು.

Join Whatsapp
Exit mobile version