ತಾಯಿಫ್: ಸೌದಿ ಅರೇಬಿಯಾದ ತಾಯಿಫ್ ನ ಹದಾ ಪರ್ವತದ ತುದಿಯಿಂದ ಸ್ಕಿಡ್ ಆದ ಕಾರು ಕಮರಿಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕಾರು ಚಲಾಯಿಸಲು ಅಡ್ಡಿಯಾಗಿ ವಾಹನ ಕಮರಿಗೆ ಬಿದ್ದಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮಝ್ದಾ ಕಾರಿನಲ್ಲಿ ಮೂವರು ತಾಯಿಫ್ ನ ಹದಾ ಪರ್ವತದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಮರಿಗೆ ಬಿದ್ದಿರುವ ಕುರಿತು ಮಾಹಿತಿ ಲಭಿಸಿದೆ ಎಂದು ತಾಯಿಫ್ ಗವರ್ನರ್ ವ್ಯಾಪ್ತಿಯ ಸುರಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಘಟನಾ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕಾರು ಮತ್ತು ಪ್ರಯಾಣಿಕರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದಾಗ ಮೂರು ಮೃತದೇಹಗಳನ್ನು ವಿವಿಧ ಕಡೆಗಳಿಂದ ಪತ್ತೆಯಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿವೆ.
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಹದಾ ರಸ್ತೆಯನ್ನು ಮುಚ್ಚಿದ್ದರು. ಆದರೆ ಇತ್ತೀಚೆಗೆ ಸಂಚಾರಕ್ಕೆ ಅವಕಾಶ ನೀಡಿದ್ದರು.