Home ಟಾಪ್ ಸುದ್ದಿಗಳು ಪಿಎಫ್‌ಐ, ಎಸ್‌ಡಿಪಿಐ ನಾಯಕರಿದ್ದ ವಾಟ್ಸಾಪ್ ಗ್ರೂಪ್‌ನಲ್ಲಿ ಸದಸ್ಯರಾಗಿದ್ದಕ್ಕೆ ಮೂವರು ಪೊಲೀಸರ ವರ್ಗಾವಣೆ

ಪಿಎಫ್‌ಐ, ಎಸ್‌ಡಿಪಿಐ ನಾಯಕರಿದ್ದ ವಾಟ್ಸಾಪ್ ಗ್ರೂಪ್‌ನಲ್ಲಿ ಸದಸ್ಯರಾಗಿದ್ದಕ್ಕೆ ಮೂವರು ಪೊಲೀಸರ ವರ್ಗಾವಣೆ

ಇಡುಕ್ಕಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್‌ಡಿಪಿಐ ನಾಯಕರಿರುವ ವಾಟ್ಸಾಪ್ ಗ್ರೂಪ್‌ನ ಸದಸ್ಯರಾಗಿದ್ದರು ಎಂಬ ಕಾರಣಕ್ಕೆ ಮೂವರು ಪೊಲೀಸರನ್ನು ವರ್ಗಾವಣೆ ಮಾಡಿರುವ ಘಟನೆ ಕೇರಳದ ಮುನ್ನಾರ್‌ನಲ್ಲಿ ನಡೆದಿದೆ.

ಪಿಎಫ್‌ಐ ಎಸ್‌ಡಿಪಿಐ ನಾಯಕರಿರುವ ಕ್ರಿಯೇಟಿವ್ ಸ್ಪೇಸ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಸದಸ್ಯರಾಗಿದ್ದೇ ಈ ಮೂವರು ಪೊಲೀಸರ ವಿರುದ್ಧ ಶಿಸ್ತು ಕ್ರಮಕ್ಕೆ ಕಾರಣ.

ಈ ಮೂವರು ಪೊಲೀಸರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಪಿಎನ್ ಅಪ್ಲಿಕೇಶನ್‌ಗಳನ್ನು ಬಳಸಿರುವುದು ಸಹ ಕಂಡುಬಂದಿದೆ. 

ನಾವು ಇದ್ದ ಗ್ರೂಪ್ ಕೇವಲ ಎಸ್‌ಡಿಪಿಐ, ಪಿಎಫ್‌ಐ ನಾಯಕರಿರುವ ವಾಟ್ಸಾಪ್ ಗ್ರೂಪ್ ಅಲ್ಲ. ಅದು ಮಹಲ್ಲ್ (ಮಸೀದಿ ಜಮಾಅತ್ ವ್ಯಾಪ್ತಿ) ಸಮಿತಿಯ ಗ್ರೂಪ್ ಆಗಿತ್ತು ಎಂದು ವರ್ಗಾವಣೆಗೊಂಡ ಪೊಲೀಸರು ಹೇಳಿದ್ದು, ಈ ಗ್ರೂಪ್‌ನಲ್ಲಿ ಅವರನ್ನು ಹೊರತುಪಡಿಸಿ ಇತರ 9 ಪೊಲೀಸರು, 15 ಸರಕಾರಿ ನೌಕರರು ವಿವಿಧ ರಾಜಕೀಯ ಪಕ್ಷದ ನಾಯಕರೂ ಸದಸ್ಯರಾಗಿದ್ದರು ಎಂದು ಪೊಲೀಸ್ ಆಂತರಿಕ ತನಿಖೆ ವೇಳೆ ಮಾಹಿತಿ ನೀಡಿದ್ದಾರೆ.

Join Whatsapp
Exit mobile version