ಡೆಹ್ರಾಡೂನ್: ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯಲ್ಲಿ ಭಾನುವಾರ 10 ಗಂಟೆಗಳ ಅವಧಿಯಲ್ಲಿ ಮೂರು ಸಾಧಾರಣ ಭೂಕಂಪನಗಳು ಸಂಭವಿಸಿದ್ದು, ಜನರನ್ನು ಆತಂಕಕ್ಕೆ ದೂಡಿವೆ. ಮಧ್ಯ ರಾತ್ರಿ 12.45ಕ್ಕೆ 2.5 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇದರ ಕಂಪನ ಕೇಂದ್ರವು ಭಟ್ವಾರಿ ವಲಯದ ಸಿರೋರ್ ಕಾಡಿನಲ್ಲಿತ್ತು.
ಸ್ವಲ್ಪವೇ ಹೊತ್ತಿನಲ್ಲಿ ಅದೇ ಪ್ರದೇಶದಲ್ಲಿ ಇನ್ನೊಂದು ಕಂಪನ ನಡೆದಿದೆ. ಬೆಳಿಗ್ಗೆ ಗಂಟೆ 10.10ಕ್ಕೆ ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆಯ ಭೂಕಂಪನ ನಡೆದಿದೆ. ಇದರ ಎಪಿಕ್ ಸೆಂಟರ್ ಉತ್ತರ ಕಾಶಿಯ ಈಶಾನ್ಯ ಭಾಗದಲ್ಲಿತ್ತು.
ಉತ್ತರಾಖಂಡವು ಭೂಕಂಪ ವಲಯದಲ್ಲಿದೆ. ಇವು ಅಷ್ಟು ತೀವ್ರತೆಯದಲ್ಲದ ಭೂಕಂಪನಗಳಾದರೂ, ಅದೂ ಮೂರು ಕೆಲವೇ ಗಂಟೆಗಳ ಅಂತರದೊಳಗೆ ಆದುದರಿಂದ ಜನರು ಆತಂಕಕ್ಕೊಳಗಾದರು.
ಭಾನುವಾರದ ಮೊದಲ ಭೂಕಂಪನ 2.5 ತೀವ್ರತೆಯದು. ಎನ್ ಸಿಎಸ್- ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಅದರ ಬೆನ್ನಿಗೇ ತುಸು ಹೊತ್ತಿನಲ್ಲಿ ಮತ್ತೊಂದು ಭೂಕಂಪ ಆದುದಾಗಿ ಹೇಳಿದೆ. ಇದರ ತೀವ್ರತೆ ತೀರಾ ಸ್ಥಳೀಯವಾಗಿತ್ತು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಹೇಳಿದರು.