Home ಟಾಪ್ ಸುದ್ದಿಗಳು ಮೂರು ಬಸ್’ಗಳು ಬೆಂಕಿಗಾಹುತಿ

ಮೂರು ಬಸ್’ಗಳು ಬೆಂಕಿಗಾಹುತಿ

ಬೆಂಗಳೂರು: ಆಕಸ್ಮಿಕ ಬೆಂಕಿ ತಗುಲಿ ಮೂರು ಬಸ್’ಗಳು ದಹನವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಮೈಸೂರು ರಸ್ತೆಯ ಆರ್.ವಿ ಎಂಜಿನಿಯರಿಂಗ್ ಕಾಲೇಜ್ ಬಳಿ ಈ ದುರ್ಘಟನೆ ನಡೆದಿದೆ.


ಪಾರ್ಕ್ ಮಾಡಿದ್ದ ಬಸ್’ಗಳಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ. ಬಸ್’ಗಳು SRS ಟ್ರಾವೆಲ್ಸ್’ಗೆ ಸೇರಿದ್ದಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ತೊಡಗಿದ್ದಾರೆ.

Join Whatsapp
Exit mobile version