Home ಟಾಪ್ ಸುದ್ದಿಗಳು ವಾಮಂಜೂರಿನಲ್ಲಿ ಶಾರದೋತ್ಸವದ ಬ್ಯಾನರ್ ಹರಿದು ಕೋಮು ಗಲಭೆಗೆ ಯತ್ನ: ಮೂವರು ಆರೋಪಿಗಳ ಬಂಧನ

ವಾಮಂಜೂರಿನಲ್ಲಿ ಶಾರದೋತ್ಸವದ ಬ್ಯಾನರ್ ಹರಿದು ಕೋಮು ಗಲಭೆಗೆ ಯತ್ನ: ಮೂವರು ಆರೋಪಿಗಳ ಬಂಧನ

►ಸುಮಿತ್, ಯತೀಶ್, ಪ್ರವೀಣ್ ರಿಂದ ಕೃತ್ಯ

ಮಂಗಳೂರು: ವಾಮಂಜೂರು ಜಂಕ್ಷನ್ ನಲ್ಲಿ ಶಾರದೋತ್ಸವದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಎಂದು ಗುರುತಿಸಲಾಗಿದೆ.

ದಿನಾಂಕ 08-10-2022 ರಂದು ಮಧ್ಯರಾತ್ರಿ ಸಮಯ ನಗರದ ವಾಮಂಜೂರು ಜಂಕ್ಷನ್ ನಲ್ಲಿ ಶಾರದೋತ್ಸವ ಕಾರ್ಯಕ್ರಮಕ್ಕೆ ಶುಭಕೋರಲು ವಾಮಂಜೂರು ಫ್ರೆಂಡ್ಸ್ ಸಂಘಟನೆಯು ಸಾರ್ವಜನಿಕ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು.

ಈ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ರೀತಿಯ ಕುಕೃತ್ಯಗಳು ಧಾರ್ಮಿಕ ಭಾವನೆಗಳನ್ನು ನಿಂದನೆಗೊಳಿಸುವ ಉದ್ದೇಶ ಅಡಗಿದೆ ಎಂದು ಆರೋಪಿಸಿ ಈ ಕೃತ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಪ್ರಕರಣವನ್ನು ಭೇಧಿಸಬೇಕೆಂದು ದೂರು ನೀಡಲಾಗಿತ್ತು.

Join Whatsapp
Exit mobile version