Home ಕರಾವಳಿ ಬೆಳ್ತಂಗಡಿ | ಸರಕಾರಿ ಬಸ್ ತಡೆದು ಕರ್ತವ್ಯಕ್ಕೆ ಅಡ್ಡಿ: ಮೂವರು ಆರೋಪಿಗಳ ಬಂಧನ!

ಬೆಳ್ತಂಗಡಿ | ಸರಕಾರಿ ಬಸ್ ತಡೆದು ಕರ್ತವ್ಯಕ್ಕೆ ಅಡ್ಡಿ: ಮೂವರು ಆರೋಪಿಗಳ ಬಂಧನ!

ಮಂಗಳೂರು: ಚಾರ್ಮಾಡಿಯಲ್ಲಿ ಸರಕಾರಿ ಬಸ್ಸನ್ನು ತಡೆ ಹಿಡಿದು ಗಲಾಟೆ ಎಬ್ಬಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬಸ್ ನಿರ್ವಾಹಕ ದೂರು ನೀಡಿದ ದೂರಿನಂತೆ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಚಾರ್ಮಾಡಿ ಗ್ರಾಮದ ಮುಹಮ್ಮದ್ ಶಬೀರ್(21), ಮುಹಮ್ಮದ್ ಮಹ್ರೂಫ್(22) ಹಾಗೂ ಮುಹಮ್ಮದ್ ಮುಬಶ್ಶಿರ್(23) ಗುರುತಿಸಲಾಗಿದೆ.

ಶನಿವಾರ ಸಂಜೆ ಕಾಲೇಜು ಮುಗಿಸಿ ವಾಪಸ್ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳು ಉಜಿರೆಯಿಂದ ಬಸ್ ಹತ್ತಿದ್ದು, ಚಾರ್ಮಾಡಿಯಲ್ಲಿ ಇಳಿಯಲು ಬಸ್ ನಿಲ್ಲಿಸಲು ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ ವೇಗದೂತ ಬಸ್ ಆಗಿದ್ದ ಹಿನ್ನೆಲೆ ಎಲ್ಲ ಕಡೆಯಲ್ಲಿಯೂ ಬಸ್ ನಿಲ್ಲಿಸಲು ಸಾಧ್ಯವಿಲ್ಲವೆಂದು ನಿರ್ವಾಹಕರು ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಮತ್ತು ಕಂಡೆಕ್ಟರ್ ನಡುವೆ ವಾಗ್ವಾದ ನಡೆದು ಬಸ್ ನಿರ್ವಾಹಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಚಾರ್ಮಾಡಿ ಬಳಿ ಗುಂಪೊಂದು ಬಸ್ಸನ್ನು ತಡೆ ಹಿಡಿದಿದೆ. ಈ ಬಗ್ಗೆ ನಿರ್ವಾಹಕ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ರವಿವಾರ ಬಂಧಿಸಿದ್ದಾರೆ.

Join Whatsapp
Exit mobile version