Home ಟಾಪ್ ಸುದ್ದಿಗಳು ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಿಗೆ ಸ್ವೆರಿಜೆಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿ

ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಿಗೆ ಸ್ವೆರಿಜೆಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿ

ಸ್ವೀಡನ್: ಅಮೆರಿಕದ ಆರ್ಥಿಕ ತಜ್ಞರಾದ ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಮತ್ತು ಜೇಮ್ಸ್ ಎ ರಾಬಿನ್ಸನ್ ಅವರಿಗೆ 2024ರ ಸಾಲಿನ ಸ್ವೆರಿಜೆಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿ ಸಿಕ್ಕಿದೆ. ಇದು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದೂ ಕರೆಯಲ್ಪಡುತ್ತದೆ.


ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ವೆರಿಜೆಸ್ ರಿಕ್ಸ್ ಬ್ಯಾಂಕ್ ನಿಂದ ನೀಡಲಾಗುವ ಪ್ರಶಸ್ತಿ ಇದಾಗಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಅಮೆರಿಕದ ಮೂವರು ಆರ್ಥಿಕ ತಜ್ಞರು, ಸಾಮಾಜಿಕ ಸಂಸ್ಥೆಗಳು ಹೇಗೆ ರಚನೆ ಆಗುತ್ತವೆ, ಹಾಗೂ ಅವುಗಳಿಂದ ಪ್ರಗತಿ ಮೇಲೆ ಏನು ಪರಿಣಾಮ ಎಂಬುದನ್ನು ತಮ್ಮ ಅಧ್ಯಯನಗಳಿಂದ ವಿವರಿಸಿದ್ದಾರೆ. ಇವರ ಈ ಸಾಧನೆಗಾಗಿ ನೊಬೆಲ್ ಪುರಸ್ಕಾರ ಲಭಿಸಿದೆ.


ಆಲ್ಫ್ರೆಡ್ ನೊಬೆಲ್ ಎಂಬ ಸ್ವೀಡಿಶ್ ವಿಜ್ಞಾನಿ ಮತ್ತು ಉದ್ಯಮಿಯ ಸಾವಿನ ನಂತರ ಅವರ ಅಭಿಲಾಷೆಯಂತೆ ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಔಷಧ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಈ ಐದು ವಿಭಾಗಗಳಲ್ಲಿ ಸಾಧಕರಿಗೆ ನೊಬೆಲ್ ಬಹುಮಾನ ನೀಡುತ್ತಾ ಬರಲಾಗಿದೆ. ಆದರೆ, ಸ್ವೀಡನ್ನ ಸ್ವೆರಿಗೆಸ್ ರಿಕ್ಸ್ ಬ್ಯಾಂಕ್ 1969ರಿಂದ ಆರ್ಥಿಕ ವಿಜ್ಞಾನ ವಿಭಾಗದಲ್ಲೂ ಪ್ರಶಸ್ತಿ ನೀಡುತ್ತಿದೆ. ಇದಕ್ಕೆ ನೊಬೆಲ್ ಫೌಂಡೇಶನ್ ನ ಅನುಮೋದನೆ ಇದೆಯಾದ್ದರಿಂದ ನೊಬೆಲ್ ಬಹುಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದು ಅಧಿಕೃತ ನೊಬೆಲ್ ಪುರಸ್ಕಾರ ಎನಿಸುವುದಿಲ್ಲ.

Join Whatsapp
Exit mobile version