ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ನಿವಾಸದ ಮೇಲೆ ಬುಧವಾರ ನಡೆದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸಾವಿರಾರು ಮತದಾರರ ಗುರುತಿನ ಚೀಟಿಗಳು ಹಾಗೂ ಗಿಫ್ಟ್ ಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕೆಜಿಎಫ್ ಬಾಬು ಅವರ ಮನೆ ರುಕ್ಸಾನಾ ಪ್ಯಾಲೇಸ್ ಮೇಲಿನ ದಾಳಿ ವೇಳೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1925ಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆಯಾಗಿವೆ. 1925 ಚೆಕ್ ಗಳ ಜೊತೆಯಲ್ಲಿ ವೋಟರ್ ಐಡಿಗಳನ್ನು ಅಟ್ಯಾಚ್ ಮಾಡಿ ಶೇಖರಿಸಿಡಲಾಗಿತ್ತು.
ಮನೆಯ ಮೊದಲ ಮಹಡಿಯ ರೂಮ್ನಲ್ಲಿ ಚೆಕ್ ಹಾಗು ವೋಟರ್ ಐಡಿಗಳು, ಚೆಕ್ಗಳು, ಮನೆಯ ನೆಲಮಹಡಿಯಲ್ಲಿ 26 ಬ್ಯಾಗ್ಗಳಲ್ಲಿ ಸೀರೆ, ಚಿಕ್ಕಪೇಟೆಗೆ ಸಂಬಂಧಿಸಿದ ಮುದ್ರಣ ಪ್ರತಿಗಳು, ವ್ಯಾನ್ ಹುಸೇನ್ ಕಂಪನಿಯ 481 ಸೂಟ್ಗಳು ಪತ್ತೆಯಾಗಿವೆ.