ನವದೆಹಲಿ: ಮಾಜಿ ಶಾಸಕ, ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಜೈಲಿನಲ್ಲಿ ಮೃತಪಟ್ಟಿದ್ದು, ಗಾಜಿಪುರದ ಮೊಹಮದಾಬಾದ್ ನ ಕಾಳಿ ಬಾಗ್ ನಲ್ಲಿ ಅವರ ತಾಯಿಯ ಪಕ್ಕದಲ್ಲಿ ಬೆಂಬಲಿಗರು ಮತ್ತು ಭಾರಿ ಭದ್ರತೆಯ ನಡುವೆ ದಫನ ಮಾಡಲಾಯಿತು.
ಅವರ ಪುತ್ರ ಉಮರ್ ಅನ್ಸಾರಿ ಮತ್ತು ಸಹೋದರ ಅಫ್ಜಲ್ ಅನ್ಸಾರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಮುಖ್ತಾರ್ ಅನ್ಸಾರಿ ಸಾವಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಉತ್ತರಪ್ರದೇಶ ಬಾಂಡಾ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.