“ನನ್ನನ್ನು ಕೊಲ್ಲುತ್ತಾರೆ ಎಂದು ಭಾವಿಸಿದ್ದೆ” : ಚೀನಾ ಸೈನಿಕರಿಂದ ಅಪಹರಣಕ್ಕೊಳಗಾದ ಸಂತ್ರಸ್ತ ಯುವಕನ ಹೇಳಿಕೆ

Prasthutha|

ನವದೆಹಲಿ: ಅರುಣಾಚಲ ಪ್ರದೇಶದಿಂದ ಚೀನಾ ಸೈನಿಕರಿಂದ ಅಪಹರಣಕ್ಕೊಳಗಾದ ಸಂತ್ರಸ್ತ ಭಾರತೀಯ ಯುವಕ ಮಿರಾಮ್ ಟ್ಯಾರೋನ್ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸುತ್ತಾ, “ಚೀನಾದ ವಶದಲ್ಲಿದ್ದ ನನ್ನನ್ನು ಕಟ್ಟಿಹಾಕಿ, ಒದ್ದು ವಿದ್ಯುತ್ ಶಾಕ್ ನೀಡಲಾಗಿತ್ತು. ಈ ವೇಳೆ ಚೀನಾ ಸೈನಿಕರು ನನ್ನನ್ನು ಕೊಲ್ಲುತಾರೆ ಎಂದೇ ಭಾವಿಸಿದ್ದೆ” ಎಂದು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

- Advertisement -

ಜನವರಿ 18 ರಂದು ಸ್ನೇಹಿತ ಜಾನಿ ಯಾಯಿಂಗ್ ಎಂಬವನೊಂದಿಗೆ ಅವರೊಂದಿಗೆ ಬೇಟೆಯಾಡಲು ತೆರಳಿದ್ದ ಸಂದರ್ಭದಲ್ಲಿ ನನ್ನನ್ನು ನಿಯಂತ್ರಣ ರೇಖೆಯ ಬಳಿಯ ಲುಂಗ್ವಾ ಜೋರ್ ಎಂಬಲ್ಲಿಂದ ಅಪಹರಿಸಿದ್ದರು. ಈ ಮಧ್ಯೆ ಯಾಯಿಂಗ್ ಅಲ್ಲಿಂದ ತಪ್ಪಿಸಿಕೊಂಡು ಭಾರತೀಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ಚೀನಾದ ಸೈನಿಕರಿಂದ ಅಪಹರಣದಿಂದಾಗಿ ಭಯಭೀತನಾಗಿದ್ದೆ ಮತ್ತು ನಡುಗಿದ್ದೆ ಎಂಬ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭಯದಿಂದ ನನಗೆ ಅಳಲು ಕೂಡ ಸಾಧ್ಯವಾಗಲಿಲ್ಲ. ಎರಡು ಸಲ ವಿದ್ಯುತ್ ಶಾಕ್ ಕೂಡ ನೀಡಲಾಗಿತ್ತು ಎಂದು ಆರೋಪಿಸಿದರು.

- Advertisement -

ಈ ಮಧ್ಯೆ ಜನವರಿ 27 ರಂದು ಸಂತ್ರಸ್ತ ಯುವಕನನ್ನು ಅಂಜಾವ್ ಜಿಲ್ಲೆಯಿಂದ ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿತ್ತು.



Join Whatsapp
Exit mobile version