ಬೆಂಗಳೂರು: ಕರ್ನಾಟಕದಲ್ಲಿ ಮದ್ರಸ, ಉರ್ದು ಶಾಲೆಗಳನ್ನು ಬಂದ್ ಮಾಡಬೇಕು. ಬೇಕಾದರೆ ಕನ್ನಡ ಕಲಿಯಬೇಕು, ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ, ಇಲ್ಲಿ ನಿಮಗೇನು ಕೆಲಸವಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉರ್ದು ಬೇಕು, ಹಿಜಾಬ್ ಬೇಕು, ಇಸ್ಲಾಮ್ ಧರ್ಮದ ರೀತಿಯಲ್ಲಿ ನಡೆಯಬೇಕು ಎನ್ನುವುದಾದರೆ ಪಾಕಿಸ್ತಾನಕ್ಕೆ ಹೋಗಿ. ಇದಕ್ಕಾಗಿಯೇ ಪೂಜ್ಯ ಮಹಾತ್ಮ ಗಾಂಧಿಯವರು ನಿಮಗೆ ಪಾಕಿಸ್ತಾನ ಕೊಟ್ಟಿದ್ದಾರೆ. ಇಲ್ಲಿ ಇರಬೇಕಾದರೆ ನಮ್ಮ ದೇಶದ ಡಾ.ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದಂತೆ ನಮ್ಮ ಸಂಸ್ಕೃತಿಗೆ ಒಗ್ಗಿ ನಡೆಯುವುದಿದ್ದರೆ ಇರಿ, ಇಂತಹದ್ದಕ್ಕೆ ಆಸ್ಪದ ನೀಡಿದರೆ ದೇಶದ ಮುಂದಿನ ಭವಿಷ್ಯಕ್ಕೆ ಅಪಾಯವಿದೆ ಎಂದು ಹೇಳಿದರು.
ಯತ್ನಾಳ್ ಹೇಳಿಕೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.