Home ಟಾಪ್ ಸುದ್ದಿಗಳು ಮೋದಿ ಸುನಾಮಿ ಇದೆ ಎನ್ನುವವರು ದಕ್ಷಿಣ ಭಾರತದಲ್ಲಿ ಎಲ್ಲಿದೆ ಅಂತ ತೋರಿಸಲಿ: ಪ್ರಿಯಾಂಕ್ ಖರ್ಗೆ ಸವಾಲು

ಮೋದಿ ಸುನಾಮಿ ಇದೆ ಎನ್ನುವವರು ದಕ್ಷಿಣ ಭಾರತದಲ್ಲಿ ಎಲ್ಲಿದೆ ಅಂತ ತೋರಿಸಲಿ: ಪ್ರಿಯಾಂಕ್ ಖರ್ಗೆ ಸವಾಲು

ಕಲಬುರಗಿ: ‘ದಕ್ಷಿಣ ಭಾರತದಲ್ಲಿ ಮೋದಿ ಸುನಾಮಿ, ಬಿಜೆಪಿ ಪರವಾದ ಗಾಳಿ ಇದ್ದಿದ್ದರೇ ಬಿಜೆಪಿಯವರು ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿನ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದ್ದು ಏಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿಯುತವಾದ ಪಕ್ಷಕ್ಕೆ ಸ್ವಂತ ಬಲದ ಮೇಲೆ ಗೆಲ್ಲುವ ವಿಶ್ವಾಸ ಇಲ್ಲವೇ? ಮೋದಿ ಸುನಾಮಿ ಇದೆ ಎನ್ನುವವರು ದಕ್ಷಿಣ ಭಾರತದಲ್ಲಿ ಎಲ್ಲಿದೆ ತೋರಿಸಲಿ’ ಎಂದು ಸವಾಲು ಹಾಕಿದರು.


‘ಅವರವರ ಅಸ್ತಿತ್ವಕ್ಕಾಗಿ ಚುನಾವಣೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ– ಜೆಡಿಎಸ್ ಹೊಂದಾಣಿಕೆಯ ಮೂಲಕ ಇಬ್ಬರೂ ಹರಕೆಯ ಕುರಿಗಳಾಗಿದ್ದಾರೆ. ಕೇಳಿದಷ್ಟು ಸೀಟು ಸಿಗಲಿಲ್ಲವೆಂದು ಬಿಜೆಪಿಯ ಪಾಲುದಾರ ಎಚ್ ಡಿ ಕುಮಾರಸ್ವಾಮಿ ಅವರು ಅತೃಪ್ತರಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

Join Whatsapp
Exit mobile version