ಹೊಸದಿಲ್ಲಿ: ನಕಲಿ ವೀಸಾ ಹಿಡಿದು ಪ್ಯಾರಿಸ್ ಗೆ ಹೊರಟಿದ್ದ ಮೂವರು ಭಾರತೀಯರನ್ನು ಸಿಐಎಸ್ ಎಫ್- ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂರನೆಯ ಟರ್ಮಿನಲ್ ನಲ್ಲಿ ಇಂದು ಈ ಘಟನೆ ನಡೆದಿದೆ.
ಈ ಮೂವರು ಪ್ರಯಾಣಿಕರು ಸಂಶಯಾಸ್ಪದವಾಗಿ ಕಂಡಾಗ ಸಿಐಎಸ್ ಎಫ್ ಸಿಬ್ಬಂದಿ ಅವರ ವೀಸಾವನ್ನು ಕ್ರಾಸ್ ಚೆಕ್ ನಡೆಸಿ ಅದು ನಕಲಿ ಎಂದು ಪತ್ತೆಹಚ್ಚಿದ್ದಾರೆ. ಬಲೆಗೆ ಬಿದ್ದ ಮೂವರನ್ನು ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದ್ದು ವಂಚನೆ ಮತ್ತು ನಕಲಿ ದಾಖಲೆ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.