Home ಟಾಪ್ ಸುದ್ದಿಗಳು ಕಾಂಗ್ರೆಸ್​ ಪಕ್ಷದ ಯೋಜನೆಗಳ ಲಾಭ ಪಡೆದುಕೊಂಡವರೇ ನಮ್ಮನ್ನು ವಿರೋಧಿಸುತ್ತಿದ್ದಾರೆ: ಪರಮೇಶ್ವರ್

ಕಾಂಗ್ರೆಸ್​ ಪಕ್ಷದ ಯೋಜನೆಗಳ ಲಾಭ ಪಡೆದುಕೊಂಡವರೇ ನಮ್ಮನ್ನು ವಿರೋಧಿಸುತ್ತಿದ್ದಾರೆ: ಪರಮೇಶ್ವರ್

ತುಮಕೂರು: ಕಾಂಗ್ರೆಸ್​ ನ ಯೋಜನೆಗಳ ಲಾಭ ಪಡೆದುಕೊಂಡವರೇ ನಮ್ಮನ್ನು ವಿರೋಧ ಮಾಡುತ್ತಿದ್ದಾರೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ 18 ವರ್ಷದವರಿಗೆ ಮತದಾನದ ಹಕ್ಕು ನೀಡಿದ್ದರು. ಕಾಂಗ್ರೆಸ್ ಬಡವರ ಪರವಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್​ ನವರು ಅಲ್ಪಸಂಖ್ಯಾತರ ಪರ ಅಂತಾ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಲ್ಪಸಂಖ್ಯಾತರು ಈ ದೇಶದಲ್ಲಿ ಹುಟ್ಟಿಲ್ವಾ. ಕೋಟ್ಯಂತರ ಅಲ್ಪಸಂಖ್ಯಾತರಿದ್ದಾರೆ, ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಜೆಡಿಎಸ್​ ನವರು ಜಾತ್ಯತೀತ ಎಂದು ಇಟ್ಟುಕೊಂಡು ಬದಲಾಗಿದ್ದಾರೆ. ದೆಹಲಿಗೆ ಕರೆದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

Join Whatsapp
Exit mobile version