Home ಟಾಪ್ ಸುದ್ದಿಗಳು ರಾಮ ಮಂದಿರ ವಿರೋಧಿಸಿದವರು ರಾಮ ಎಲ್ಲರಿಗೂ ಅನ್ನುತ್ತಿದ್ದಾರೆ: ಯೋಗಿ ಆದಿತ್ಯನಾಥ್

ರಾಮ ಮಂದಿರ ವಿರೋಧಿಸಿದವರು ರಾಮ ಎಲ್ಲರಿಗೂ ಅನ್ನುತ್ತಿದ್ದಾರೆ: ಯೋಗಿ ಆದಿತ್ಯನಾಥ್

ಗೋರಖ್ಪುರ್: ನಕಾರಾತ್ಮಕ ಮನೋಭಾವದವರು ರಾಮಮಂದಿರ ಆಂದೋಲನವನ್ನು ವಿರೋಧಿಸಿದ್ದರು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಮಂದಿರಕ್ಕಾಗಿ ಶಿಲಾನ್ಯಾಸ ಮಾಡಿದ ನಂತರ ಅವರು ‘ರಾಮ ಪ್ರತಿಯೋರ್ವನಿಗೂ ಸೇರಿದವನು’ ಎಂದು ಒತ್ತಿಹೇಳತೊಡಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವಿವಾರ ಹೇಳಿದ್ದಾರೆ.

ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು “ಹಿಂದಿನ ಸರಕಾರ ಪ್ರತಿಯೊಂದು ವಿವಾದ ಉಳಿಯುವುದನ್ನು ಬಯಸಿತ್ತು. ರಾಮ ದೇವರು ಕಾಲ್ಪನಿಕವೆಂದ್ ಹೇಳುತ್ತಿದ್ದವರು ಈಗ ಆತ ಎಲ್ಲರಿಗೂ ಸೇರಿದವನೆಂದು ಹೇಳುತ್ತಿದ್ದಾರೆ. ಇದು ಮಾರ್ಪಾಡಾಗಿದೆ” ಎಂದು ಅವರು ಹೇಳಿದರು.

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪ್ರಾಧಾನಿ ಮೋದಿಯವರು ಶಿಲಾನ್ಯಾಸ ಮಾಡಿರುವುದು “ರಾಮ ಮಂದಿರ ಆಂದೋಲನ ಸಕಾರಾತ್ಮಕವಾಗಿತ್ತ್ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

“ಆಂದೋಲನವನ್ನು  ಎದುರಿಸುತ್ತಿದ್ದವರು ನಕಾರಾತ್ಮಕ ಮನೋಸ್ಥಿತಿ ಹೊಂದಿದ್ದರು ಮತ್ತು ಹಾಗಾಗಿ ಅದನ್ನು ಅವಮಾನಿಸಲು ಪ್ರಯತ್ನಿಸಿದರು. ಪ್ರತಿಯೊಂದು ರಂಗದಲ್ಲಿಯೂ ಅವರು ವಿಫಲರಾದಾಗ ರಾಮ ಎಲ್ಲರಿಗೂ ಸೇರಿದವನೆಂದು ಹೇಳುತ್ತಿದ್ದಾರೆ. ಈ ಬುದ್ಧಿವಂತಿಕೆ ಯಾವತ್ತೂ ಉಳಿಯಲಿ” ಎಂದು ಅವರು ಹೇಳಿದರು.

Join Whatsapp
Exit mobile version