Home ಟಾಪ್ ಸುದ್ದಿಗಳು ಸೋಂಕಿಗೆ ಒಳಗಾದವರಿಗೆ ಲಸಿಕೆಯ ಎರಡನೇ ಡೋಸ್ ಅಗತ್ಯವಿಲ್ಲ : ಅಧ್ಯಯನ ವರದಿ

ಸೋಂಕಿಗೆ ಒಳಗಾದವರಿಗೆ ಲಸಿಕೆಯ ಎರಡನೇ ಡೋಸ್ ಅಗತ್ಯವಿಲ್ಲ : ಅಧ್ಯಯನ ವರದಿ

ಹೊಸದಿಲ್ಲಿ : ಈಗಾಗಲೇ ಸೋಂಕಿಗೆ ಒಳಗಾದವರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಅಗತ್ಯವಿಲ್ಲ, ಒಂದು ಡೋಸ್ ಸಾಕು ಎಂದು ಅಧ್ಯಯನವೊಂದು ತಿಳಿಸಿದೆ.

 ಸೋಂಕಿಗೆ ಒಳಗಾದವರನ್ನು ಸೋಂಕನ್ನು ಹೊಂದಿರದವರಿಗೆ ಹೋಲಿಸಿದರೆ ಸೋಂಕಿಗೆ ಒಳಗಾದವರಲ್ಲೇ ಹೆಚ್ಚಿನ ಪ್ರತಿಕಾಯ ಕಂಡು ಬಂದಿದೆ. ಆದ್ದರಿಂದ ಸೋಂಕಿಗೆ ಒಳಗಾದವರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಅಗತ್ಯವಿಲ್ಲ, ಒಂದು ಡೋಸ್ ನೀಡಿದರೆ ಸಾಕು ಎಂದು ಎಐಜಿ ಆಸ್ಪತ್ರೆಗಳ ಸಂಶೋಧಕರ ತಂಡ ನಡೆಸಿದ ಅಧ್ಯಯನ ವರದಿ ತಿಳಿಸಿದೆ.

ಜನವರಿ 6ರಿಂದ ಫೆಬ್ರವರಿ 5ರೊಳಗೆ ಲಸಿಕೆಯನ್ನು ಪಡೆದುಕೊಂಡ 260 ಮಂದಿ ವೈದ್ಯಕೀಯ ಸಿಬ್ಬಂದಿಗಳನ್ನು ಈ ಅಧ‍್ಯಯನಕ್ಕೆ ಒಳಪಡಿಸಿ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಪರೀಕ್ಷಿಸಲಾಗಿದೆ. ಯಾರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೋ ಅವರು ಕೋವಿಡ್ ಲಸಿಕೆಯ ಮೊದಲ ಡೋಸ್ ಮಾತ್ರ ಪಡೆದರೆ ಸಾಕು. ಎರಡನೇ ಡೋಸ್ ಅಗತ್ಯವಿಲ್ಲ. ಮೊದಲ ಡೋಸ್ ಮೆಮೋರಿ ಸೆಲ್ ಪ್ರಕ್ರಿಯೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

Join Whatsapp
Exit mobile version