ಲಖ್ನೋ: ಟೋಪಿ ಹಾಕಿದವರಿಂದ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದಾರೆ.
“2017ಕ್ಕೂ ಮೊದಲು ಎಷ್ಟು ಲುಂಗಿ ತೊಟ್ಟ ಗೂಂಡಾಗಳು ಇಲ್ಲಿ ತಿರುಗಾಡಿದ್ದರು? ಟೋಪಿ ಹಾಕಿಕೊಂಡು ಬಂದೂಕು ತೋರಿಸಿ ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿದ್ದವರು ಯಾರು? ನಿಮ್ಮ ಜಮೀನನ್ನು ಒತ್ತುವರಿ ಮಾಡಿ ಪೊಲೀಸರ ಮೊರೆ ಹೋಗದಂತೆ ಬೆದರಿಕೆ ಹಾಕಿದವರು ಯಾರು? ಒಮ್ಮೆ ಆಲೋಚಿಸಿ” ಎಂದು ಮೌರ್ಯ ಹೇಳಿದ್ದಾರೆ.
ಇದಕ್ಕೂ ಮುನ್ನ ಮೌರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸಲಿದ್ದೇವೆ ಎಂದು ಹೇಳಿದ್ದರು. ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸುವುದಾಗಿ ಹಿಂದುತ್ವ ಸಂಘಟನೆಗಳ ಬೆದರಿಕೆಯ ನಡುವೆಯೇ ಅವರು ಈ ಹೇಳಿಕೆ ನೀಡಿದ್ದರು.