Home ಕರಾವಳಿ ಸಜಿಪ ಜಂಕ್ಷನ್’ನಲ್ಲಿ ಈ ವರ್ಷವೂ ಇರಲಿದೆ ಉಚಿತ ‘ಇಫ್ತಾರ್ ಪಾಯಿಂಟ್’

ಸಜಿಪ ಜಂಕ್ಷನ್’ನಲ್ಲಿ ಈ ವರ್ಷವೂ ಇರಲಿದೆ ಉಚಿತ ‘ಇಫ್ತಾರ್ ಪಾಯಿಂಟ್’


►ಉತ್ಸಾಹಿ ಯುವಕರ ತಂಡದಿಂದ ಕಳೆದ ಮೂರು ವರ್ಷಗಳಿಂದ ಉಚಿತ ಇಫ್ತಾರ್ ವ್ಯವಸ್ಥೆ

ಮಂಗಳೂರು: ಸಾಮಾಜಿಕ ಕಾರ್ಯಕರ್ತ ನವಾಝ್ ಸಜೀಪ ಅವರ ನೇತೃತ್ವದ Friends forever ಎಂಬ ಸ್ನೇಹಿತರ ತಂಡವು ಕಳೆದ 3 ವರ್ಷಗಳಿಂದ ಸಜಿಪ ಜಂಕ್ಷನ್’ನಲ್ಲಿ ನಡೆಸಿಕೊಂಡು ಬರುತ್ತಿರುವ ಉಚಿತ ಇಫ್ತಾರ್ ಪಾಯಿಂಟ್ ಈ ವರ್ಷವೂ ನಡೆಯಲಿದೆ.


ಪವಿತ್ರ ರಂಝಾನ್ ತಿಂಗಳಿನಲ್ಲಿ ಇಫ್ತಾರ್ ಸಮಯದಲ್ಲಿ ಪ್ರಯಾಣಿಕರಿಗೆ ಉಳ್ಳಾಲ, ಕಾಸರಗೋಡು, ಮೆಲ್ಕಾರ್, ಬಿಸಿರೋಡ್ ಪುತ್ತೂರು, ಉಪ್ಪಿನಂಗಡಿ ಭಾಗಕ್ಕೆ ಪ್ರಯಾಣಿಸುವ ಮತ್ತು ವಿಶೇಷವಾಗಿ ದೇರಳಕಟ್ಟೆ ಪರಿಸರದಲ್ಲಿರುವ ಆಸ್ಪತ್ರೆಗೆ ಆಗಮಿಸುವ ಮತ್ತು ಅಲ್ಲಿಂದ ನಿರ್ಗಮಿಸುವ ರೋಗಿಗಳಿಗೆ ಮತ್ತು ಇನ್ನಿತರ ಕೈಗಾರಿಕಾ ಉದ್ಯಮಿಗಳಿಗೆ, ಕೆಲಸಗಾರರಿಗೆ ತುಂಬಾ ಅನುಕೂಲಕರವಾಗಿರುವ ಈ ಕಾರ್ಯವನ್ನು ಸತತ 3 ವರ್ಷಗಳಿಂದ ಉತ್ಸಾಹಿ ಸ್ನೇಹಿತರಾದ ತಾಹಿದ್ ಸಜಿಪ, ನಿಯಾಝ್ ಬಸ್ ಸ್ಟ್ಯಾಂಡ್ , ಲತೀಫ್ SN, ತಬ್ಸೀರ್, ಆರಿಫ್ CBS, ಬದ್ರುದ್ದೀನ್, ಸಿರಾಜ್ ಮತ್ತು ಸ್ಥಳೀಯವಾಗಿ ಕಾರ್ಯಾಚರಿಸುತ್ತಿರುವ ಎಲ್ಲ ಅಂಗಡಿಗಳ ಸಹಕಾರದಿಂದ ನಡೆಯುತ್ತಾ ಬರುತ್ತಿದೆ.

ಆದ್ದರಿಂದ ಇಫ್ತಾರ್ ಸಮಯದಲ್ಲಿ ಸಜೀಪ ನಡು ಆಸು ಪಾಸಿನಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ಇದರ ಉಪಯೋಗವನ್ನು ಪಡೆಯಬೇಕು ಎಂದು ಸಂಘಟಕ ನವಾಝ್ ಸಜೀಪ ಮನವಿ ಮಾಡಿದ್ದಾರೆ.

Join Whatsapp
Exit mobile version