Home ಟಾಪ್ ಸುದ್ದಿಗಳು ಇದು ವಿಶ್ವದ ಅತ್ಯಂತ ಚಿಕ್ಕ ಏರ್​ಪೋರ್ಟ್​: ಮರದ ಕೆಳಗೆ ಕೂತು ಕಾಯಬೇಕು.!

ಇದು ವಿಶ್ವದ ಅತ್ಯಂತ ಚಿಕ್ಕ ಏರ್​ಪೋರ್ಟ್​: ಮರದ ಕೆಳಗೆ ಕೂತು ಕಾಯಬೇಕು.!

ವಿಮಾನ ನಿಲ್ದಾಣ ಎಂದ ತಕ್ಷಣ ನಿಮ್ಮ ಕಣ್ಣಿಗೆ ವೇಟಿಂಗ್ ಪ್ರದೇಶ, ತಿಂಡಿ, ತಿನಿಸುಗಳು, ವಿಮಾನಗಳು, ಐಷಾರಾಮಿ ಮೂಲಸೌಕರ್ಯಗಳೇ ನೆನಪಿಗೆ ಬರುತ್ತವೆ. ಈ ದೇಶದ ವಿಮಾನ ನಿಲ್ದಾಣ ಸಾಮಾನ್ಯ ವಿಮಾನ ನಿಲ್ದಾಣಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಅದು ಜಗತ್ತಿನ ಸಣ್ಣ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಕೊಲಂಬಿಯಾದ ಅಗುವಾಚಿಕಾ ಎಂಬ ಸ್ಥಳದಲ್ಲಿ ಹಕಾರಿಟಮಾ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣದ ಗಾತ್ರದಿಂದಾಗಿ ಅದು ಪ್ರಸಿದ್ಧವಾಗಿದೆ. ವಿಮಾನ ಹೊರಡಲು 20 ನಿಮಿಷಗಳು ಬಾಕಿ ಇರುವಾಗ ಬೋರ್ಡಿಂಗ್ ಪ್ರಕ್ರಿಯೆಗಳು ಶುರುವಾಗುತ್ತವೆ.

ಅಲ್ಲಿ ಲಗೇಜ್ ಪರಿಶೀಲಿಸಲು ಸ್ಕ್ಯಾನ್​ ಕೂಡ ಇಲ್ಲ, ಕೈಯಲ್ಲಿ ಪರಿಶೀಲಿಸಲಾಗುತ್ತದೆ. ಇಲ್ಲಿ ಸ್ಕ್ಯಾನರ್ ಯಂತ್ರ ಇರಿಸಲೂ ಕೂಡ ಸ್ಥಳವಿಲ್ಲ. ಜನರು ವಿಮಾನ ನಿಲ್ದಾಣಕ್ಕೆ ಬಂದರೆ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕು.

ಈ ವಿಮಾನ ನಿಲ್ದಾಣದಲ್ಲಿ ಐಷಾರಾಮಿ ಕಾಯುವ ಕೊಠಡಿ ಇಲ್ಲ, ಬದಲಿಗೆ ಮಾವಿನ ಮರದ ಕೆಳಗೆ ನಿರ್ಮಿಸಲಾದ ಬೆಂಚುಗಳ ಮೇಲೆ ಜನರು ಕಾಯುತ್ತಾರೆ.

Join Whatsapp
Exit mobile version