ಅಮ್ಮೆಂಬಳ ಹೆಲ್ಪ್ ಲೈನ್ ಇದರ ಎರಡನೇ ವಾರ್ಷಿಕೋತ್ಸವ ಹಾಗೂ ರಮಜಾನ್ ಕಿಟ್ ವಿತರಣೆ

Prasthutha|

►ಹಾಫಿಲ್ ಆದ ಮಕ್ಕಳಿಗೆ, ಸಮಾಜ ಸೇವಕರಿಗೆ ಸನ್ಮಾನ

     ಮಂಗಳೂರು ತಾಲೂಕು ಬೋಳಿಯಾರು ಗ್ರಾಮದ ಹಲವಾರು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಅಮ್ಮೆಂಬಳ ಹೆಲ್ಪ್ ಲೈನ್ ಇದರ ಎರಡನೇ ವಾರ್ಷಿಕೋತ್ಸವ ಹಾಗೂ ರಮಝಾನ್ ಕಿಟ್ ವಿತರಣೆ ಮಾಡಲಾಯಿತು.  

- Advertisement -

ಇತ್ತೀಚೆಗೆ ಹಾಫಿಲ್ ಪೂರ್ತಿಗೊಳಿಸಿದ ಅಮ್ಮೆಂಬಳದವರಾದ R k. ಸಲ್ಮಾನ್ ಫಾರಿಸ್, ಮಹಮದ್ ಅನೀಸ್, ರಂತಡ್ಕ ಹಾಫಿಲ್. ಮುಝಮ್ಮಿಲ್, ಹಾಫಿಲ್ ಮಹಮ್ಮದ್, ಹಾಫಿಲ್ ಮುಸ್ತಫ ಹಾಗೂ ಸಮಾಜಸೇವಕರಾದ ಹೆಲ್ಪ್ ಲೈನ್ ಅಧ್ಯಕ್ಷ ಹಾಗೂ ಅಮ್ಮೆಂಬಳ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಉಬೈದ್. ಬಿ ಯಚ್, ಸೌದಿ ಅರೇಬಿಯಾದಲ್ಲಿ ದುಡಿಯುತ್ತಿರುವ ಹೆಲ್ಪ್ ಲೈನ್ ಗೆ ಸದಾ ಸಹಕಾರವನ್ನು ನೀಡುತ್ತಿರುವ,  ಸಮಾಜಸೇವಕರಾದ. ಇಕ್ಬಾಲ್ ಬಿ ಯಚ್. ಹಾಗೂ ನೌಶಾದ್ ಬೋಳಿಯಾರ್ ಗ್ರಾಮದಲ್ಲಿ ಕೋರೋನಾ  ಸಂದರ್ಭದಲ್ಲಿ ಉತ್ತಮ ಸಮಾಜಸೇವೆಗಾಗಿ ಶರೀಫ್ ರಂತಡ್ಕ,  ಈ ಸಂದರ್ಭದಲ್ಲಿ ಅಗತ್ಯವಾದ ಬ್ಲಡ್ ಒದಗಿಸಿಕೊಟ್ಟ ಇಕ್ಬಾಲ್ ಮದ್ಯಾನಡ್ಕ, ಉತ್ತಮ ಸಮಾಜ ಸೇವಕ ಆಟೋಚಾಲಕ ಅಬ್ದುಲ್ ಖಾದರ್ ಪುತ್ತ, ಸೇರಿದಂತೆ 11ಮಂದಿ ಸಾಧಕರಿಗೆ ಸನ್ಮಾನಿಸಲಾಯಿತು.

ಈ ವೇಳೆ 63ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಲಾರ್ ಹೆಲ್ಪ್ ಲೈನ್ ಇದರ ಅಧ್ಯಕ್ಷರಾದ ಸಮೀರ್ ಟಿಪ್ಪು ನಗರ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಲ್ಪ್ ಲೈನ್ ಅಧ್ಯಕ್ಷ ಉಬೈದ್ ಬಿ ಯಚ್. ವಹಿಸಿದ್ದರು. ಹೆಲ್ಪ್ ಲೈನ್ ಕಾರ್ಯದರ್ಶಿ ಸಿರಾಜ್ ಸ್ವಾಗತಿಸಿದರು.  ಸಿಯಾಬ್ ಕಿರಾಹತ್ ಪಾರಾಯಣಗೈದರು. ಸಮಾಜಸೇವಕ ಅಶ್ರಫ್ ಮೋನು ಬೋಳಿಯಾರ್, ಸಂಘಟನೆ ಯಾವ ರೀತಿ ಇರಬೇಕು ಎಂಬ ಬಗ್ಗೆ ಸಂದೇಶವನ್ನು ನೀಡಿದರು.

 ಈ ಸಂದರ್ಭದಲ್ಲಿ ಬೋಳಿಯಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಸಾಕುರ್, ಹೆಲ್ಪ್ ಲೈನ್ ಕಾರ್ಯಕ್ರಮದ ಬಗ್ಗೆ. ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಕೆ ಜಬ್ಬಾರ್, ಗ್ರಾಮ ಪಂಚಾಯತ್ ಸದಸ್ಯ ಸಿದ್ದೀಕ್ ಕುಕ್ಕೋಟ್, ಅಮ್ಮೆಂಬಳ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಸಿದ್ದಿಕ್ ಜಿ. ಹಾಗೂ ಹನೀಫ್ ಯಸ್. ಅಮ್ಮೆಂಬಳ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾದ. ಕರೀಮ್ ಜಿ, ಹನೀಫ್ ಬಿ ಐ ಟಿ, ಕಾರ್ಯದರ್ಶಿ ಸಬೀರ್, ಕೋಶಾಧಿಕಾರಿ ಆಸಿಫ್, ಎಸ್ ವೈ ಎಸ್ ಮುಖಂಡ ಯೂಸುಫ್ ಪಾನೇಲ, ಕೇಂದ್ರ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿ ಆರ್ಕೆ ಮುಸ್ತಫ, ಅಮ್ಮೆಂಬಳ ಹೆಲ್ಪ್ ಲೈನ್ ಪದಾಧಿಕಾರಿಗಳಾದ ರಿಯಾಜ್ ಟಿ.ಲತೀಫ್,  ಟಿ. ಅಶ್ರಫ್  ಬಿ. ಮನ್ಸೂರ್, ಪರ್ವೀಝ್ ನಬೀಲ್, ನಿಝಾಂ,ಸದಸ್ಯರಾದ ಗುಲ್ಜಾರ್ ಆರೀಫ್, ಇಲಿಯಾಸ್, ಫಾರೂಕ್ ಕೋಟೆ ಮುಬಾರಕ್. ಝಕರಿಯ. ಸೀರಾಪತ್ ಇಕ್ಬಾಲ್ ಜಿ. ಉಪಸ್ಥಿತರಿದ್ದರು.  ಕೊನೆಯಲ್ಲಿ  ಹೆಲ್ಪ್ ಲೈನ್ ಮೀಡಿಯಾ ಇಂಚಾರ್ಜ್ ತಂಜೀದ್  ಧನ್ಯವಾದಗೈದರು. ಕಾರ್ಯಕ್ರಮವನ್ನು ಜವಾದ್ ನಿರೂಪಿಸಿದರು.

- Advertisement -