ಇದು ಮೋದಿ ಯುಗದ ಹೊಸ ಸಂಕಲ್ಪ ದಿನ: ನಳಿನ್ ಕುಮಾರ್ ಕಟೀಲ್

Prasthutha|

ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯು ವಿಜಯದ ಪತಾಕೆಯನ್ನು ಹಾರಿಸುತ್ತಿದ್ದಂತೆಯೇ ಈ ಫಲಿತಾಂಶ ಮೋದಿ ಯುಗದ ಹೊಸ ಸಂಕಲ್ಪ ದಿನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

- Advertisement -


ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಐದು ವರ್ಷಗಳಲ್ಲಿ ತೆಗೆದುಕೊಂಡ ಕ್ರಮದ ಗೆಲುವು ಇದಾಗಿದೆ. ರಾಜಕೀಯ ದಾಳಕ್ಕೆ ಮಾಡಿದ ಕಪಾಳ ಮೋಕ್ಷ. ರಾಮ ಮಂದಿರ ನಿರ್ಮಾಣ ಸಂಕಲ್ಪ, ಕಾಶಿ, ಭವ್ಯ ಕಾಶಿ ದಿವ್ಯ ಕಾಶಿ ನಿರ್ಮಾಣದ ನಡುವೆ ಕಮಲ ಅರಳಿದೆ ಎಂದರು.


ಈ ದಿನವು ಭಾರತದ ಹೊಸ ಸಂಕ್ರಮಣ, ಮೋದಿ ಯುಗದ ಹೊಸ ಸಂಕಲ್ಪ ದಿನ. ದೇಶದ ಏಳಿಗೆಗೆ ಕುತ್ತು ತಂದಿರುವವರಿಗೆ ಈ ಫಲಿತಾಂಶವು ಪಾಠ ಕಳಿಸಿದೆ. ಬಿಜೆಪಿಯ ಗೆಲುವು ಅನಿರೀಕ್ಷಿತ ಅಲ್ಲ, ಬದಲಾಗಿ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳ ಮೈಲಿಗಲ್ಲು ಎಂದು ಕಟೀಲ್ ಹೇಳಿದರು.



Join Whatsapp