ಇದು ನನ್ನ ಊರು.. ನನ್ನ ಗ್ರೌಂಡ್: ಕನ್ನಡಿಗ ರಾಹುಲ್​ ಆರ್ಭಟಕ್ಕೆ RCB ಸೈಲೆಂಟ್!​

- Advertisement -

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 24 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ ಗಳಿಂದ ಸೋಲಿಸಿತು. ಕೆಎಲ್ ರಾಹುಲ್ ಅವರ ಅದ್ಭುತ ಅಜೇಯ ಇನ್ನಿಂಗ್ಸ್ (53 ಎಸೆತಗಳಲ್ಲಿ 93 ರನ್) ಡೆಲ್ಲಿ ತಂಡಕ್ಕೆ ನಾಲ್ಕನೇ ಗೆಲುವಿನ ಅವಕಾಶ ಮಾಡಿಕೊಟ್ಟಿತು.

- Advertisement -

ಪವರ್ ಪ್ಲೇನಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದರೂ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ರಾಹುಲ್ ಸೆಟಲ್ ಆಗುತ್ತಿದ್ದಂತೆ ಬೆಂಗಳುರು ಬೌಲರ್ ​ಗಳ ಚೆಂಡಾಡಿದರು. ಇದಕ್ಕಾಗಿ ಇವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ರಾಹುಲ್ ಏನು ಹೇಳಿದರು ನೋಡಿ.

‘‘ಇದು ಕಠಿಣ ವಿಕೆಟ್ ಆಗಿತ್ತು.. ಆದರೆ 20 ಓವರ್‌ ಗಳ ಕಾಲ ವಿಕೆಟ್ ಹಿಂದೆ ನಾನು ಇದ್ದಿದ್ದು, ಪಿಚ್ ಅನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಯಾವ ಹೊಡೆತಗಳನ್ನು ಆಡಬೇಕೆಂದು ನನಗೆ ತಿಳಿದಿತ್ತು ಮತ್ತು ನಾನು ಉತ್ತಮ ಆರಂಭವನ್ನು ಮಾಡಲು ಬಯಸಿದ್ದೆ. ಈ ರೀತಿಯ ವಿಕೆಟ್‌ ನಲ್ಲಿ ನನಗೆ ಎಲ್ಲಿ ಆಡಬೇಕೆಂದು ತಿಳಿದಿತ್ತು. ನೀವು ದೊಡ್ಡ ಸಿಕ್ಸ್ ಹೊಡೆಯಲು ಬಯಸಿದರೆ ಅದನ್ನು ಎಲ್ಲಿ ಹೊಡೆಯಬೇಕು?, ಬ್ಯಾಟ್ಸ್‌ ಮನ್‌ ಗಳು ಹೇಗೆ ಔಟಾಗುತ್ತಿದ್ದಾರೆ ಮತ್ತು ಅವರು ಎಲ್ಲಿ ಸಿಕ್ಸರ್‌ ಗಳನ್ನು ಹೊಡೆಯುತ್ತಿದ್ದಾರೆ ಎಂಬುದನ್ನು ನಾನು ವಿಕೆಟ್ ಕೀಪಿಂಗ್ ಮೂಲಕ ತಿಳಿದುಕೊಳ್ಳಲು ಸಾಧ್ಯವಾಯಿತು’’ ಎಂದು ತಮ್ಮ ಬ್ಯಾಟಿಂಗ್ ರಹಸ್ಯ ತಿಳಿಸಿದ್ದಾರೆ.

- Advertisement -

‘‘ಕ್ಯಾಚ್ ತಪ್ಪಿಸಿಕೊಂಡಿದ್ದರಿಂದ ಅದೃಷ್ಟವೂ ನನಗೆ ಬೆಂಬಲ ನೀಡಿತು. ಇದು ನನ್ನ ನೆಲ, ನನ್ನ ಊರು ಮತ್ತು ನನಗೆ ಇಲ್ಲಿಯ ಬಗ್ಗೆ ಇತರರಿಗಿಂತ ಚೆನ್ನಾಗಿ ತಿಳಿದಿದೆ. ನಾನು ವಿಭಿನ್ನ ರೀತಿಯ ವಿಕೆಟ್‌ ಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಅದನ್ನು ಸಂಭ್ರಮಿಸಲು ಬಳಸುತ್ತೇನೆ. ಇಲ್ಲಿ ನನಗೆ ಒಂದು ರನ್ ಎಲ್ಲಿ ಸಿಗುತ್ತದೆ ಮತ್ತು ಆರು ರನ್ ಎಲ್ಲಿ ಸಿಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ’’ ಎಂದು ವಿವರಿಸಿದ್ದಾರೆ.

ಕನ್ನಡಿಗ ಕೆ.ಎಲ್.ರಾಹುಲ್ (93) ಅದ್ಭುತ ಪ್ರದರ್ಶನ ನೀಡಿದರು. ಸ್ಟಬ್ಸ್ (38) ಕೂಡ ಮಿಂಚಿದರು. ಬೆಂಗಳೂರು ಪರ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಸುಯಾಶ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಆರಂಭಿಕ 3.4 ಓವರ್​ನಲ್ಲೆ ಸ್ಫೋಟಕ ಬ್ಯಾಟಿಂಗ್​ ಮೂಲಕ 61 ರನ್​ ಭಾರಿಸಿತು. ಆದರೆ, ಪವರ್ ಪ್ಲೇ ನಂತರ ಬೆಂಗಳೂರು ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು ಸಾಮಾನ್ಯ ಮೊತ್ತಕೆ ಕುಸಿಯಿತು.ಆರಂಭಿಕ ಬ್ಯಾಟರ್​ ಫಿಲಿಪ್ ಸಾಲ್ಟ್ (37) ವಿರಾಟ್ ಕೊಹ್ಲಿ (22) ಜೊತೆಗೂಡಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್​ ಮಾಡಿದರು. ರಜತ್ ಪಾಟಿದಾರ್ (25) ಮತ್ತು ಕೃನಾಲ್ ಪಾಂಡ್ಯ (18) ರನ್ ಗಳಿಸಿದರು.

ದೇವದತ್ ಪಡಿಕ್ಕಲ್ (1), ಲಿವಿಂಗ್‌ಸ್ಟನ್ (4) ಮತ್ತು ಜಿತೇಶ್ ಶರ್ಮಾ (3) ಒಂದು ಅಂಕಿಯ ಸ್ಕೋರ್‌ಗೆ ಸೀಮಿತರಾದರು. ಟಿಮ್ ಡೇವಿಡ್ (37*) ಕೊನೆಯಲ್ಲಿ ಮಿಂಚಿದ್ದರಿಂದ ಆರ್‌ಸಿಬಿ ತಂಡದ ಸ್ಕೋರ್ 150ರ ಗಡಿ ದಾಟಿತು.

ದೆಹಲಿ ಬೌಲರ್‌ಗಳಲ್ಲಿ ವಿಪ್ರಜ್ ನಿಗಮ್ 2 ವಿಕೆಟ್, ಕುಲದೀಪ್ ಯಾದವ್ 2, ಮುಖೇಶ್ ಕುಮಾರ್ ಮತ್ತು ಮೋಹಿತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

- Advertisement -


Must Read

Related Articles