Home ಟಾಪ್ ಸುದ್ದಿಗಳು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ಇದು ಮೋದಿಯ ಜನ್ ಧನ್ ಲೂಟಿ ಯೋಜನೆ ಎಂದ ರಾಹುಲ್

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ಇದು ಮೋದಿಯ ಜನ್ ಧನ್ ಲೂಟಿ ಯೋಜನೆ ಎಂದ ರಾಹುಲ್

ನವದೆಹಲಿ: ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಪ್ರಧಾನ ಮಂತ್ರಿಯ ಜನ್ ಧನ್ ಲೂಟಿ ಯೋಜನೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,  ಮೇ 2014ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದ  ತೈಲ ಬೆಲೆ ಹಾಗೂ ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ತೈಲ ಬೆಲೆಯ ಬಗ್ಗೆ ಅಂಕಿ ಅಂಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೀತಿಯನ್ನು ಟೀಕಿಸಿದ್ದಾರೆ.

Join Whatsapp
Exit mobile version