Home ಟಾಪ್ ಸುದ್ದಿಗಳು ಹನ್ನೆರಡು ಮಂದಿ IAS, IPS ಅಧಿಕಾರಿಗಳಿರುವ ಈ ಮುಸ್ಲಿಮ್ ಕುಟುಂಬ ಎಲ್ಲರಿಗೂ ಸ್ಪೂರ್ತಿ!

ಹನ್ನೆರಡು ಮಂದಿ IAS, IPS ಅಧಿಕಾರಿಗಳಿರುವ ಈ ಮುಸ್ಲಿಮ್ ಕುಟುಂಬ ಎಲ್ಲರಿಗೂ ಸ್ಪೂರ್ತಿ!

ಜೈಪುರ್: ರಾಜಸ್ಥಾನದ ಮುಸ್ಲಿಮ್ ಕುಟುಂಬವೊಂದರಲ್ಲಿ ಹನ್ನೆರಡು ಮಂದಿ IPS, IAS ಶ್ರೇಣಿಯ ಅಧಿಕಾರಿಗಳಿದ್ದಾರೆ ಎಂದು ವರದಿಯಾಗಿದೆ.


ರಾಜಸ್ಥಾನದ ಜುಂಜುನುವಿನ ನುವಾನ್ ಗ್ರಾಮದ ಈ ಕಯಮ್‌ ಖಾನಿಯಲ್ಲಿರುವ ಈ ಮುಸ್ಲಿಂ ಕುಟುಂಬವು ಭಾರತೀಯ ಸೇನೆಗೆ ಆಡಳಿತಾತ್ಮಕ ಸೇವೆಯನ್ನು ಮಾತ್ರವಲ್ಲದೆ ಅತ್ಯುತ್ತಮ ಅಧಿಕಾರಿಗಳನ್ನು ಸಹ ನೀಡಿದೆ. ಈ ಕುಟುಂಬದಲ್ಲಿ ಕಲೆಕ್ಟರ್, ಐಜಿ ಸೇರಿದಂತೆ ಬ್ರಿಗೇಡಿಯರ್ ಗಳು, ಕರ್ನಲ್ ಗಳು ಇದ್ದಾರೆ.
ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಯಿಂದ ನಿವೃತ್ತರಾದ ನಯೀಮ್ ಅಹ್ಮದ್ ಖಾನ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅಧಿಕಾರಿಗಳ ಕುಟುಂಬದ ಬಗ್ಗೆ ವಿವರಿಸಿದ್ದಾರೆ.

ಅಧಿಕಾರಿಗಳ ಕುಟುಂಬದ ಸದಸ್ಯರಾದ ಲಿಯಾಖತ್ ಖಾನ್ ಅವರು ನುವಾನ್‌ ನಲ್ಲಿರುವ ಮೊದಲ ಹೈಯರ್ ಸೆಕೆಂಡರಿ ಶಾಲೆಯ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿದ್ದರು. ಅವರು ಮೊದಲು RPS ಮತ್ತು ನಂತರ IPS ಪೂರ್ಣಗೊಳಿಸಿದರು ನಯೀಮ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಅಧಿಕಾರಿಗಳ ಕುಟುಂಬದ ವಿವರ ಈ ಕೆಳಗಿನಂತಿವೆ…

  1. ಲಿಯಾಖತ್ ಖಾನ್ IPS

1972 ರಲ್ಲಿ RPS ಪೂರ್ತಿಗೊಳಿಸಿದ ಲಿಯಾಖತ್ ಖಾನ್ ನಂತರ ಬಡ್ತಿ ಪಡೆದು ಐಪಿಎಸ್ ಆಗಿ ಐಜಿ ಹುದ್ದೆಯಿಂದ ನಿವೃತ್ತರಾದರು. ಅವರು ವಕ್ಫ್ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ನಂತರ 2020 ರಲ್ಲಿ ನಿಧನರಾದರು.

  1. ಅಶ್ಫಕ್ ಹುಸೇನ್ IAS

ಮಾಜಿ IPS ಅಧಿಕಾರಿ ಲಿಯಾಖತ್ ಖಾನ್ ಅವರ ಕಿರಿಯ ಸಹೋದರ ಅಶ್ಫಾಕ್ ಹುಸೇನ್ 1983 ರಲ್ಲಿ RAS ಆಗಿ ಆಯ್ಕೆಯಾದರು. 2016ರಲ್ಲಿ ಐಎಎಸ್ ಆಗಿ ಬಡ್ತಿ ಪಡೆದರು. ಅವರು ಶಿಕ್ಷಣ ಇಲಾಖೆಯಲ್ಲಿ ವಿಶೇಷ ಸರ್ಕಾರಿ ಕಾರ್ಯದರ್ಶಿ, ದೌಸಾ ಜಿಲ್ಲಾಧಿಕಾರಿ ಮತ್ತು ದರ್ಗಾ ನಾಝಿಮ್ ಕೂಡ ಆಗಿದ್ದಾರೆ. 2018 ರಲ್ಲಿ ನಿವೃತ್ತರಾದರು.

3.ಝಾಕೀರ್ ಖಾನ್ IAS

ಲಿಯಾಖತ್ ಖಾನ್ ಅವರ ಸಹೋದರ ಝಾಕಿರ್ ಖಾನ್ 2018 ರ ಬ್ಯಾಚ್ ನ IAS ಅಧಿಕಾರಿಯಾಗಿದ್ದು, ಪ್ರಸ್ತುತ ಶ್ರೀಗಂಗಾನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ.

  1. ಶಾಹಿನ್ ಖಾನ್ RAS

RAS ಅಧಿಕಾರಿ ಶಾಹೀನ್ ಖಾನ್, ಲಿಯಾಖತ್ ಖಾನ್ ಅವರ ಪುತ್ರ. ಪ್ರಸ್ತುತ CMO ನಲ್ಲಿ ಕರ್ತವ್ಯದಲ್ಲಿದ್ದಾರೆ. ಈ ಹಿಂದೆ ಅಶೋಕ್ ಗೆಹ್ಲೋಟ್ ಅವರ OSD ಕೂಡ ಆಗಿದ್ದರು.

  1. ಮೋನಿಕಾ DIG ಜೈಲ್

ಶಾಹೀನ್ ಖಾನ್ ಪತ್ನಿ ಮೋನಿಕಾ ಕೂಡ ಅಧಿಕಾರಿ. ಅವರು ಜೈಲು ಸೂಪರಿಂಟೆಂಡೆಂಟ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಮೋನಿಕಾ ಜೈಪುರ ಜೈಲು ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  1. ಶಾಕೀಬ್ ಖಾನ್ – ಬ್ರಿಗೇಡಿಯರ್

ಲಿಯಾಖತ್ ಖಾನ್ ಅವರ ಸೋದರಳಿಯ ಶಾಕೀಬ್ ಖಾನ್ ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದಾರೆ. ಪ್ರಸ್ತುತ ಹಿಸಾರ್‌ ನಲ್ಲಿ ಕರ್ತವ್ಯ ದಲ್ಲಿದ್ದಾರೆ.

  1. ಸಲೀಮ್ ಖಾನ್ RAS

ಲಿಯಾಖತ್ ಖಾನ್ ಅವರ ಸೋದರಳಿಯ ಸಲೀಮ್ ಖಾನ್ ಹಿರಿಯ RAS ಅಧಿಕಾರಿ. ಅವರು ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಹುದ್ದೆಯಲ್ಲಿ ಜೈಪುರದಲ್ಲಿ ಕೆಲಸ ಮಾಡುತ್ತಿದ್ದಾರೆ.

  1. ಶಾನಾ ಖಾನ್ RAS

ಹಿರಿಯ RAS ಅಧಿಕಾರಿ ಸಲೀಮ್ ಖಾನ್ ಅವರ ಪತ್ನಿ ಶಾನಾ ಖಾನ್ ಕೂಡ RAS ಅಧಿಕಾರಿಯಾಗಿದ್ದಾರೆ. ಜೈಪುರದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

9) ಫರಾ ಖಾನ್, IRS

ಫರಾ ಖಾನ್ 2016ರಲ್ಲಿ ಅಖಿಲ ಭಾರತ ಮಟ್ಟದಲ್ಲಿ 267ನೇ ರ್ಯಾಂ ಕ್ ಪಡೆದಿದ್ದರು. ನಂತರ ರಾಜಸ್ಥಾನದಿಂದ IAS ಆದ ಎರಡನೇ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಪ್ರಸ್ತುತ ಫರಾ ಅವರನ್ನು ಜೋಧ್‌ ಪುರದಲ್ಲಿ ನಿಯೋಜಿಸಲಾಗಿದೆ.

10) ಕಮರ್ ಉಲ್ ಜಮಾನ್ ಚೌಧರಿ, IAS

ಐಎಎಸ್ ಅಧಿಕಾರಿ ಫರಾ ಖಾನ್ ಅವರ ಪತಿ ಕಮರ್-ಉಲ್-ಜಮಾನ್ ಚೌಧರಿ ಕೂಡ ರಾಜಸ್ಥಾನ ಕೇಡರ್‌ನ ಐಎಎಸ್ ಆಗಿದ್ದಾರೆ. ಇವರು ಮೂಲತಃ ಜಮ್ಮು ಮತ್ತು ಕಾಶ್ಮೀರದವರು. ಸದ್ಯ ಜೋಧಪುರದಲ್ಲಿ ಕೆಲಸ ಮಾಡುತ್ತಿದ್ದಾರೆ.

11) ಜಾವೇದ್ ಖಾನ್, RAS

RAS ಅಧಿಕಾರಿ ಸಲೀಂ ಖಾನ್ ಅವರ ಸೋದರ ಮಾವ ಜಾವೇದ್ ಖಾನ್ ಕೂಡ RAS ಆಗಿದ್ದಾರೆ. ಅವರು ಜೈಪುರದಲ್ಲಿ ಸಚಿವ ಸಲೇಹ್ ಮೊಹಮ್ಮದ್ ಅವರಿಗೆ ಪಿಎಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

12) ಇಶ್ರತ್ ಖಾನ್, ಕರ್ನಲ್, ಭಾರತೀಯ ಸೇನೆ

ಬ್ರಿಗೇಡಿಯರ್ ಶಬಿಕ್ ಅವರ ಸಹೋದರಿ ಇಶ್ರತ್ ಖಾನ್ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದಾರೆ. 17 ವರ್ಷಗಳ ಹಿಂದೆ, ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿ ನೇಮಕಗೊಂಡರು. ಬಡ್ತಿ ಪಡೆದ ನಂತರ, ಅವರು ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Join Whatsapp
Exit mobile version