ಭಾರತದಲ್ಲಿ ಮೂರನೇ ಅಲೆ ಆರಂಭದ ಸೂಚನೆ: ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಡಾ. ಅರೋರಾ

Prasthutha|

- Advertisement -

ಹೊಸದಿಲ್ಲಿ: ದೇಶಾದ್ಯಂತ ಇತ್ತೀಚ್ಚೆಗೆ ವರದಿಯಾಗುತ್ತಿರುವ ಕೋವಿಡ್-19 ಪ್ರಕರಣಗಳ ಪೈಕಿ ಶೇ 50ಕ್ಕೂ ಅಧಿಕ ಪ್ರಕರಣಗಳು ಓಮಿಕ್ರಾನ್ ರೂಪಾಂತರಿಯಾಗಿವೆ ಹಾಗೂ ದೇಶದಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳು ಇತರ ದೇಶಗಳಂತೆಯೇ ಭಾರತದಲ್ಲಿ ಸಾಂಕ್ರಾಮಿಕದ ಮೂರನೇ ಅಲೆ ಆರಂಭವಾಗಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಕೋವಿಡ್-19 ಕಾರ್ಯಪಡೆ NTAGI ಅಧ್ಯಕ್ಷ ಡಾ ಎನ್ ಕೆ ಅರೋರಾ ಹೇಳಿದ್ದಾರೆ.

ಅದೇ ಸಮಯ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ ಅವರು ದೇಶದಲ್ಲಿ ಶೇ 80ಕ್ಕೂ ಅಧಿಕ ಜನರಿಗೆ ಈಗಾಗಲೇ ಒಮ್ಮೆ ಸೋಂಕು ನೈಸರ್ಗಿಕವಾಗಿ ತಗಲಿದೆ ಹಾಗೂ ಶೇ 90ಕ್ಕೂ ಅಧಿಕ ಮಂದಿಗೆ ಕನಿಷ್ಠ ಒಂದು ಡೋಸ್ ಲಸಿಕೆ ಹಾಗೂ ಶೇ 65ಕ್ಕೂ ಅಧಿಕ ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

- Advertisement -

“ದಕ್ಷಿಣ ಆಫ್ರಿಕಾದ ಉದಾಹರಣೆ ಪರಿಗಣಿಸಿದರೆ ಅಲ್ಲಿ ಎರಡು ವಾರ ಪ್ರಕರಣಗಳು ಏರಿಕೆಯಾಗಿ ನಂತರ ಕಡಿಮೆಯಾಗಿವೆ ಹಾಗೂ ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳಿರಲಿಲ್ಲ ಅಥವಾ ಅಲ್ಪ ಲಕ್ಷಣಗಳಿದ್ದವು” ಎಂದು ಹೇಳಿದ ಅವರು ಭಾರತದಲ್ಲಿ ಕಳೆದ ಏಳರಿಂದ 10 ದಿನಗಳ ಅವಧಿಯಲ್ಲಿ ಏರಿಕೆಯಾಗಿರುವ ಕೋವಿಡ್ ಪ್ರಕರಣಗಳನ್ನು ಪರಿಗಣಿಸಿದಾಗ ನಾವು ಕೋವಿಡ್ ಮೂರನೇ ಅಲೆಯ ಉತ್ತುಂಗವನ್ನು ಶೀಘ್ರ ತಲುಪುವ ಸಾಧ್ಯತೆಯಿದೆ ಎಂದು ಹೇಳಿದರು.

Join Whatsapp