ಬೆಂಗಳೂರು: ದೇಶದಲ್ಲಿ ಅಯೋಧ್ಯಾ ರಥ ಯಾತ್ರೆ ನಡೆಯುವವರೆಗೆ ಉಗ್ರಗಾಮಿಗಳು ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಉದಯ್ ಪುರ ಹತ್ಯೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯಾ ರಥಯಾತ್ರೆ ನಡೆಯುವವರೆಗೆ ಡೊಮೆಸ್ಟಿಕ್ ಟೆರರಿಸಂ ಇರಲಿಲ್ಲ. ದೇಶೀಯ ಉಗ್ರಗಾಮಿ ವ್ಯವಸ್ಥೆ ಆಮೇಲೆ ಹುಟ್ಟಿಕೊಂಡಿತು.
ಆಂತರಿಕ ಭಯೋತ್ಪಾದನೆ ಮೊದಲು ಹತ್ತಿಕ್ಕಬೇಕು. ಈ ಕೆಲಸ ಮೊದಲು ಆಗಬೇಕು. ತರಬೇತಿ ಕೊಡುವುದನ್ನು ಹತ್ತಿಕ್ಕಬೇಕು. ನೆಮ್ಮದಿ ಕದಡಲು ಎಲ್ಲರೂ ಕಾರಣ. ಪ್ರಚೋದನೆ ಎರಡೂ ಕಡೆಯಿಂದ ಬಂದಾಗ ಸಮಸ್ಯೆ ಆಗುತ್ತದೆ. ಪ್ರಚೋದನೆ ಹತ್ತಿಕ್ಕುವ ಕೆಲಸ ಮಾಡಬೇಕು ಎಂದು ವೀರಪ್ಪ ಮೊಯ್ಲಿ ಆಗ್ರಹಿಸಿದರು.