Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ : ಹೆಚ್ ವಿಶ್ವನಾಥ್

ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ : ಹೆಚ್ ವಿಶ್ವನಾಥ್

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾಕೆ ರಾಷ್ಟ್ರದ ರಾಜಕಾರಣಕ್ಕೆ ಹೋಗಬಾರದು. ಈ ಹಿಂದೆ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ಆಗುವ ಯಾವುದೇ ಕನಸು ಕಂಡಿರಲಿಲ್ಲ. ಅದರಂತೆ ಸಿದ್ದರಾಮಯ್ಯ ಅವರು ಯಾವುದೇ ಕನಸು ಕಂಡಿಲ್ಲ. ಆದರೆ ನಾವು ಕನಸು ಕಾಣುತ್ತೇವೆ ಎಂದು ಹೇಳಿದರು.


ಇನ್ನು ಸದ್ಯದ ಬಿಜೆಪಿ ಪಕ್ಷದ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿ, ರಾಜಕಾರಣಕ್ಕಾಗಿ ಕೆಲವರು ತಮ್ಮ ಮಕ್ಕಳು, ಕುಟುಂಬವನ್ನು ಬಲಿ ಕೊಟ್ಟಿದ್ದಾರೆ. ಯಾರು ಅವರವರ ಸಮಾಜವನ್ನು ತುಳಿಯುವುದಿಲ್ಲ. ಬದಲಾಗಿ ಬೇರೆಯವರನ್ನು ತುಳಿದು ರಾಜಕಾರಣದಲ್ಲಿ ಬೆಳೆಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಸಚಿವ ಉದಯ್ ನಿಧಿ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಟಾಲಿನ್ ದ್ರಾವಿಡ ಹೋರಾಟದಿಂದ ಬಂದವರು. ತಮಿಳುನಾಡು ಅಣ್ಣಾದೊರೈ, ಪೆರಿಯಾರ್ ಎಲ್ಲರೂ ದ್ರಾವಿಡರು. ಆ ನೆಲವೇ ಅಂತದ್ದು ಎಂದರು.

Join Whatsapp
Exit mobile version