Home ಟಾಪ್ ಸುದ್ದಿಗಳು ಜಾತಿ ಗಣತಿ ವರದಿ ಬಗ್ಗೆ ಆಕ್ಷೇಪ‌ ಸಲ್ಲದು: ಸತೀಶ್ ಜಾರಕಿಹೊಳಿ

ಜಾತಿ ಗಣತಿ ವರದಿ ಬಗ್ಗೆ ಆಕ್ಷೇಪ‌ ಸಲ್ಲದು: ಸತೀಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿಯಾಗುವ ಮೊದಲೇ ಅದನ್ನು ವಿರೋಧಿಸುವುದು ಸರಿಯಲ್ಲ. ಅದರ ಕುರಿತಂತೆ ಸೂಕ್ತವಾದ ಚರ್ಚೆ ನಡೆಯಬೇಕೇ ಹೊರತು ಅನಗತ್ಯ ಆಕ್ಷೇಪಣೆಗಳು ಅಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಪೂರ್ಣಗೊಂಡ ಬಳಿಕ ಜಾತಿ ಗಣತಿ ವರದಿ ಬಿಡುಗಡೆ ಸಾಧ್ಯತೆ ಇದೆ. ಉಪಮುಖ್ಯಮಂತ್ರಿಗಳ ನೇಮಕಾತಿ ಪ್ರಕ್ರಿಯೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ನೆರವೇರಬಹುದು. ಇದರ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸಲಿದ್ದು, ನಾನು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದರು.

ಹಣ ಸಂಗ್ರಹಿಸಲು ಸಚಿವರಿಗೆ ಗುರಿ ನಿಗದಿಪಡಿಸಲಾಗಿದೆ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಪಕ್ಷದಲ್ಲಿ ಅಂತಹ ಬೆಳವಣಿಗೆಗಳು ನಡೆದಿಲ್ಲ ಎಂದರು.

ಸಚಿವರ ಕಡೆಯವರಿಂದ ಸಿದ್ದರಾಮಯ್ಯ ಅವರಿಗೆ ದುಬಾರಿ ಬೆಲೆಯ ಸೋಫಾ ಮತ್ತು ಮಂಚವನ್ನು ಉಡುಗೊರೆಯಾಗಿ ನೀಡಲಾಗಿದೆ’ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಇದಕ್ಕೆ ಮುಖ್ಯಮಂತ್ರಿಯವರ ಕಚೇರಿ ಹೇಳಿಕೆ ನೀಡುತ್ತದೆ ಎಂದರು.

Join Whatsapp
Exit mobile version