Home ಟಾಪ್ ಸುದ್ದಿಗಳು SIT ಅಧಿಕಾರಿಗಳ ತನಿಖೆ ಮೇಲೆ ಸಂಪೂರ್ಣ ನಂಬಿಕೆಯಿದೆ, ಯಾರ ಹಸ್ತಕ್ಷೇಪವಿಲ್ಲ: ಸಿಎಂ ಸಿದ್ದರಾಮಯ್ಯ

SIT ಅಧಿಕಾರಿಗಳ ತನಿಖೆ ಮೇಲೆ ಸಂಪೂರ್ಣ ನಂಬಿಕೆಯಿದೆ, ಯಾರ ಹಸ್ತಕ್ಷೇಪವಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಎಸ್ ಐಟಿ ಎಂದರೆ ನಮ್ಮ ಪೊಲೀಸರೇ ತನಿಖೆ ನಡೆಸುವುದು, ಕಾನೂನು ಪ್ರಕಾರ ಎಸ್ ಐಟಿ ರಚನೆ ಮಾಡಿದ್ದೇವೆ, ನಮ್ಮ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ ಅವರು ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ತನಿಖೆ ಪ್ರಕರಣದಲ್ಲಿ ಸೂಕ್ತ ತನಿಖೆ ಮಾಡಿ ವರದಿ ನೀಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.


ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆ ಸಿಬಿಐಗೆ ನೀಡಿದ್ದ ಡಿ ಕೆ ರವಿ ಕೇಸು ಏನಾಯಿತು, ಇಂದು ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯ ಮಾಡುವವರು ಹಿಂದೆ ಟೀಕೆ ಮಾಡಿದ್ದರು. ನನಗೆ ಎಸ್ ಐಟಿ ತನಿಖೆ ಮೇಲೆ ಸಂಪೂರ್ಣ ನಂಬಿಕೆಯಿದೆ, ಅವರು ಸೂಕ್ತ ತನಿಖೆ ಮಾಡಿ ವರದಿ ಸಲ್ಲಿಸುತ್ತಾರೆ ಎಂದರು. ಪ್ರಜ್ವಲ್ ರೇವಣ್ಣ ಕೇಸಿನಲ್ಲಿ ಯಾರ ಹಸ್ತಕ್ಷೇಪ, ಒತ್ತಡವಿಲ್ಲ, ನಾನಾಗಲಿ, ಡಿ ಕೆ ಶಿವಕುಮಾರ್ ಆಗಲಿ ಮಧ್ಯೆಪ್ರವೇಶಿಸುತ್ತಿಲ್ಲ, ಪ್ರಭಾವ ಬೀರುತ್ತಿಲ್ಲ, ತನಿಖೆಯ ಹಾದಿ ತಪ್ಪಿಸುತ್ತಲೂ ಇಲ್ಲ ಎಂದರು.

Join Whatsapp
Exit mobile version