Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಮುಸ್ಲಿಂ ಸರ್ಕಾರವಿದೆ, ಕಾಂಗ್ರೆಸ್‌ನವರು ಸಂಘಪರಿವಾರದಲ್ಲಿ ತರಬೇತಿ ಪಡೆದುಕೊಳ್ಳಲಿ: ಸೂಲಿಬೆಲೆ

ರಾಜ್ಯದಲ್ಲಿ ಮುಸ್ಲಿಂ ಸರ್ಕಾರವಿದೆ, ಕಾಂಗ್ರೆಸ್‌ನವರು ಸಂಘಪರಿವಾರದಲ್ಲಿ ತರಬೇತಿ ಪಡೆದುಕೊಳ್ಳಲಿ: ಸೂಲಿಬೆಲೆ

ಕಲಬುರಗಿ: ಕಾಂಗ್ರೆಸ್ ನಾಯಕರು ಸಂಘಪರಿವಾರದಲ್ಲಿ ತರಬೇತಿ ಪಡೆದುಕೊಳ್ಳಲಿ. ಆಗ ಆರ್‌ಎಸ್‌ಎಸ್ ಏನು ಹೇಳುತ್ತದೆ ಗೊತ್ತಾಗುತ್ತದೆ ಎಂದು ಪ್ರಚಾರಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಲಾದರೂ ಕಾಂಗ್ರೆಸ್ ನಾಯಕರಿಗೆ ಒಳ್ಳೆಯ ಸಂಸ್ಕೃತಿ ಬರುತ್ತದೆ. ನಾಲ್ಕು ದಿನ ಶಾಖೆಗೂ ಬರಲಿ, ಅಲ್ಲೂ ಒಳ್ಳೆಯ ಭಾಷೆ, ತಿಳಿವು ಬರುತ್ತದೆ. ದೂರ ನಿಂತು ಏನೇನೋ ತಿಳಿದುಕೊಂಡು ಮಾತನಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಒಂದು ವಾರ ಬರಲಿ ಎಂದು ಆಹ್ವಾನ ನೀಡಿದರು.

ರಾಜ್ಯದಲ್ಲಿ ಮುಸ್ಲಿಂ ಸರಕಾರವಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಸರಕಾರ. ಅದನ್ನು ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವರೇ ಹೇಳಿಕೊಂಡು ಓಡಾಡಿದ್ದಾರಲ್ಲ ಎಂದ ಅವರು, ಶಾಖೆಗಳಿಗೆ ಬೆಳಗ್ಗೆ ಬರುವುದರಿಂದ ನಿಮ್ಮ ಆಲೋಚನೆಗಳು ಬದಲಾಗುತ್ತವೆ. ಆಗೊಂದು ಹಿಂದೂ ರಾಷ್ಟ್ರದ ಕಲ್ಪನೆ ನಿಮ್ಮಲ್ಲೂ ಮೊಳಕೆ ಒಡೆಯಲಿ ಎಂದರು.

Join Whatsapp
Exit mobile version