ಪೌರತ್ವ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಏರಿಕೆ: ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ  

Prasthutha|

ನವದೆಹಲಿ: ಪೌರತ್ವ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಗಣನೀಯವಾಗಿ ಏರುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ  ಬಹಿರಂಗಪಡಿಸಿದೆ.

- Advertisement -

2017ರಲ್ಲಿ 1,33,049 ಭಾರತೀಯರು ಪೌರತ್ವ ತ್ಯಜಿಸಿದ್ದರು. ಈ ವರ್ಷ(2022 ಅಕ್ಟೋಬರ್ 31ರವರೆಗೆ) ಒಟ್ಟು 1,83,741 ಜನರು ಪೌರತ್ವ ತೊರೆದಿದ್ದಾರೆ.

ಶುಕ್ರವಾರ ಲೋಕಸಭೆಯಲ್ಲಿ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್, ‘2015 ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ 1,31,489 ಆಗಿತ್ತು. ಆ ಸಂಖ್ಯೆ 2016ರಲ್ಲಿ 1,41,603, 2017ರಲ್ಲಿ 1,33,049, 2018ರಲ್ಲಿ 1,34,561, 2019ರಲ್ಲಿ 1,44,017, 2020ರಲ್ಲಿ 85,256 ಮತ್ತು 2021ರಲ್ಲಿ 1,63,370 ಆಗಿದೆ ಎಂದು ತಿಳಿಸಿದರು.

- Advertisement -

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದವರನ್ನು ಹೊರತುಪಡಿಸಿ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಪೌರತ್ವ ಪಡೆದಿರುವ ವಿದೇಶಿ ಪ್ರಜೆಗಳ ಸಂಖ್ಯೆಯ ಬಗ್ಗೆಯೂ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಲಾಗಿದೆ.

‘ಪಾಕ್‌, ಬಾಂಗ್ಲಾ, ಅಫ್ಗಾನಿಸ್ತಾನ ಹೊರತುಪಡಿಸಿದಂತೆ 93 (2015), 153 (2016), 175 (2017), 129 (2018). ) 13 (2019), 27 (2020), 42 (2021) ಮತ್ತು 60 (2022) ಮಂದಿ ಪೌರತ್ವ ಪಡೆದಿರುವುದಾಗಿ ಮಾಹಿತಿ ನೀಡಲಾಗಿದೆ.

Join Whatsapp