ಚಂಡೀಗಡ: ಮೈ ಬಣ್ಣ ಕಪ್ಪು ಎಂದು ದಿನನಿತ್ಯ ಹಿಯಾಳಿಸುತ್ತಿದ್ದ ಪತಿಯನ್ನು ಪತ್ನಿಯೊಬ್ಬಳು ಕೊಂದಿರುವ ದುರಂತ ಘಟನೆ ಛತ್ತೀಸ್‍ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.
ಅನಂತ್ ಸೋನ್ವಾನಿ ಪತ್ನಿಯಿಂದ ಹತ್ಯೆಯಾದ ಪತಿ. ಆರೋಪಿ ಪತ್ನಿ ಸಂಗೀತಾ ಸೋನ್ವಾನಿ ಬಂಧಿಸಿರುವುದಾಗಿ ಪಟಾಣ್ ಪ್ರದೇಶ ಪೊಲೀಸ್ ಉಪವಿಭಾಗಾಧಿಕಾರಿ ದೇವಾಂಶ್ ರಾಥೋಡ್ ತಿಳಿಸಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತಿ ನನ್ನನ್ನು ಕೊಳಕಿ, ಕಪ್ಪು ಮೈ ಬಣ್ಣ ಎಂದು ರೇಗಿಸುತ್ತಿದ್ದ. ಇದೇ ವಿಚಾರವಾಗಿ ಹಲವು ಬಾರಿ ನಮ್ಮಿಬ್ಬರ ನಡುವೆ ಜಗಳ ಕೂಡ ನಡೆದಿತ್ತು. ಕೋಪದಿಂದ ಮನೆಯಲ್ಲಿದ್ದ ಕೊಡಲಿಯಿಂದ ನನ್ನ ಪತಿಯ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ನನ್ನ ಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಆರೋಪಿ ಸಂಗೀತಾ ಪೊಲೀಸರ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.