Home ಟಾಪ್ ಸುದ್ದಿಗಳು ಅಮೆರಿಕನ್ ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ

ಅಮೆರಿಕನ್ ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ

ಮುಂಬೈ: ಜಾಗತಿಕವಾಗಿ ಅಮೆರಿಕನ್ ಡಾಲರ್ ಮುಂದೆ ರೂಪಾಯಿ ಮೌಲ್ಯವು ಮತ್ತೆ ಪಾತಾಳಕ್ಕೆ ಇಳಿದಿದ್ದು, ದಿನದ ಅಂತ್ಯಕ್ಕೆ 15 ಪೈಸೆ ಕುಸಿತದೊಂದಿಗೆ ರೂ. 82.32 ವಹಿವಾಟು ಸ್ಥಗಿತಗೊಂಡಿದೆ.ಕಳೆದ ಹಲವಾರು ತಿಂಗಳಿನಿಂದ ರೂಪಾಯಿ ಮೌಲ್ಯವು ನಿರಂತರ ಕುಸಿಯುತ್ತಲೇ ಇದೆ.

ಗುರುವಾರದದ ಅಂತ್ಯಕ್ಕೆ ರೂ. 81.88 ಇದ್ದ ರೂಪಾಯಿ, ಶುಕ್ರವಾರದ ಆರಂಭಿಕ ಮಾರುಕಟ್ಟೆಯು ರೂ. 82.20 ಕ್ಕೆ ಪ್ರಾರಂಭಗೊಂಡಿತ್ತು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲಿ ಅಮೆರಿಕನ್ ಕರೆನ್ಸಿಯ ಮೌಲ್ಯ, ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿಯ ಮೌಲ್ಯದಲ್ಲಿನ ಹೆಚ್ಚುವಿಕೆ, ದೇಶೀಯ ಷೇರುಗಳಲ್ಲಿನ ನಕಾರಾತ್ಮಾಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಕರೆನ್ಸಿಯ ಮೌಲ್ಯ ಕುಸಿಯಲು ಪ್ರಮುಖ ಕಾರಣವಿರಬಹುದು ಎಂದು ಅಂದಾಜಿಸಲಾಗುತ್ತಿದೆ.

Join Whatsapp
Exit mobile version