Home ಟಾಪ್ ಸುದ್ದಿಗಳು ಜಾತಿವಾದಿ ಆದಿತ್ಯನಾಥ್ ರನ್ನು ಮಠಕ್ಕೆ ಮರಳಿ ಕಳುಹಿಸುವ ಸಮಯ ಬಂದಿದೆ; ಮಾತಿನ ಚಾಟಿ ಬೀಸಿದ ಮಾಯಾವತಿ

ಜಾತಿವಾದಿ ಆದಿತ್ಯನಾಥ್ ರನ್ನು ಮಠಕ್ಕೆ ಮರಳಿ ಕಳುಹಿಸುವ ಸಮಯ ಬಂದಿದೆ; ಮಾತಿನ ಚಾಟಿ ಬೀಸಿದ ಮಾಯಾವತಿ

ಲಕ್ನೋ: ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿಮಾತನಾಡಿದ ಬಹುಜನ ಸಮಾಜ ಪಕ್ಷ ಅಧ್ಯಕ್ಷೆ ಮಾಯಾವತಿ ಮುಖ್ಯಮಂತ್ರಿ ಆದಿತ್ಯನಾಥ್ ರನ್ನು ಬಂದ ಸ್ಥಳಕ್ಕೆ ಮರಳಿ ಕಳುಹಿಸಿ  ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಸರ್ಕಾರ ರಚಿಸುವುದಾಗಿ ಹೇಳಿದರು.

‘ಈ ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಉತ್ಸಾಹವನ್ನು ನೋಡಿ, ನೀವು ಬಿಎಸ್ ಪಿಯನ್ನು ಮತ್ತೆ ಅಧಿಕಾರಕ್ಕೆ ತಂದು, ನಿಮ್ಮ ‘ಬೆಹನ್ ಜೀ’ಯನ್ನು ಐದನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲು ಮತ್ತು ಯೋಗಿಯನ್ನು ಅವರ ಮಠಕ್ಕೆ ಕಳುಹಿಸಲು ನೀವು ಸಿದ್ಧರಾಗಿದ್ದೀರಿ ಎಂದು ನಾನು ಹೇಳಬಲ್ಲೆ’ ಎಂದು ಮಾಯಾವತಿ ಹೇಳಿದರು.

ಆದಿತ್ಯನಾಥ್  ದೊಡ್ಡ ಜಾತಿ ಚಿಂತಕ ಮತ್ತು ಸಂಕುಚಿತ ಮನೋಭಾವದ ವ್ಯಕ್ತಿಯಾಗಿದ್ದು ಯಾವಾಗಲೂ ಜಾತೀಯತೆಯನ್ನು ಮಾತ್ರ ಇಟ್ಟುಕೊಳ್ಳುವ ಮೂಲಕ ದಲಿತರು, ಇತರ ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನವನ್ನಲ್ಲದೆ ಮುಸ್ಲಿಂ ಸಮುದಾಯಕ್ಕಾಗಿ ಸರ್ಕಾರ ಏನನ್ನೂ ಮಾಡಿಲ್ಲ. ಬ್ರಾಹ್ಮಣ ಸಮುದಾಯವನ್ನೂ ನಿರ್ಲಕ್ಷಿಸುವ ನಿಲುವನ್ನು ಬಿಜೆಪಿ ತಳೆದಿದೆ. ಈ ಕಾರಣಗಳಿಂದಾಗಿ  ಆದಿತ್ಯನಾಥ್ ರನ್ನು ಅಧಿಕಾರದಿಂದ ಹೊರಹಾಕುವುದು ಅಗತ್ಯ ಎಂದು ಹೇಳಿದರು.

ಬಿಎಸ್ಪಿ ಯ ವಿರೋಧ ಪಕ್ಷದಲ್ಲಿರುವವರು ಮಾಧ್ಯಮಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಗಳನ್ನು ಬುಡಮೇಲು ಮಾಡುವ ಮೂಲಕ ಬಿಎಸ್ ಪಿ ವಿರೋಧಿ ವಾತಾವರಣವನ್ನು ಸೃಷ್ಟಿಸಲು ಪ್ರಜ್ಞಾಪೂರ್ವಕ ಪ್ರಯತ್ನಿಸುತ್ತಿದ್ದಾರೆ ಎಂದು ಮಾಯಾವತಿ ಆರೋಪಿಸಿದರು.

ಆರನೇ ಹಂತದ ಚುನಾವಣೆ ಬಳಿಕ ಪಕ್ಷ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ಎಲ್ಲಾ ಕಡೆಯಿಂದಲೂ ಸಕಾರಾತ್ಮಕ ಸುದ್ದಿ ಇದೆ. ಚುನಾವಣೆಯ ಫಲಿತಾಂಶಗಳು ಹೊರಬಂದಾಗ, ಬಿಎಸ್ ಪಿಯನ್ನು ಹೊಡೆದುರುಳಿಸಿದ ಎಲ್ಲಾ ಮಾಧ್ಯಮಗಳು ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳುತ್ತವೆ ಎಂದು ಮಾಯಾವತಿ ಹೇಳಿದರು.

ಉತ್ತರ ಪ್ರದೇಶ ಚುನಾವಣೆಯ ಮೊದಲ ಆರು ಹಂತಗಳು ಪೂರ್ಣಗೊಂಡಿದ್ದು, ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದೆ.

Join Whatsapp
Exit mobile version