ಛತ್ತೀಸ್‌ಗಢ: ಕುಡಿದ ಅಮಲಿನಲ್ಲಿ ಶಾಲೆಗೆ ಬಂದ ಶಿಕ್ಷಕನನ್ನು ವಿದ್ಯಾರ್ಥಿಗಳು ಒದೆಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಪಾಠ ಮಾಡಬೇಕಿದ್ದ ಶಿಕ್ಷಕನೇ ಕುಡಿತದ ಅಮಲಿನಲ್ಲಿ ಬಂದಿದ್ದರಿಂದ ಮಕ್ಕಳಿಗೆ ಸಹಿಸಲಾಗಲಿಲ್ಲ. ಆತನ ಮೇಲೆ ಚಪ್ಪಲಿ ಎಸೆದು ಓಡಿಸಿದ್ದಾರೆ.
ಸ್ನೇಹಾ ಮೊರ್ದಾನಿ ಎಂಬವರು ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕ ಕುಡಿದು ಬಂದಿದ್ದಲ್ಲದೆ, ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆಗ ವಿದ್ಯಾರ್ಥಿಗಳು ಸರಿಯಾಗಿ ಬುದ್ಧಿ ಹೇಳಿದ್ದಾರೆ. ವಿದ್ಯಾರ್ಥಿಗಳ ಕ್ರಿಯೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಡಿಯೋದಲ್ಲಿ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಗುಂಪು ಶಿಕ್ಷಕನ ಮೇಲೆ ಕಲ್ಲು, ಚಪ್ಪಲಿ ಎಸೆದಿರುವುದು ಕಂಡುಬರುತ್ತದೆ. ಶಿಕ್ಷಕ ಕುಡಿದ ಅಮಲಿನಲ್ಲಿ ಶಾಲೆಯ ಆವರಣಕ್ಕೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಕ್ಕಳ ಆಕ್ರೋಶಕ್ಕೆ ಹೆದರಿದ ಕುಡುಕ ಶಿಕ್ಷಕ ಕೊನೆಗೆ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಎಕ್ಸ್‌ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡ ಪತ್ರಕರ್ತರೊಬ್ಬರು ಹೀಗೆ ಬರೆದಿದ್ದಾರೆ, ಬಸ್ತಾರ್‌ನಲ್ಲಿ ಶಿಕ್ಷಕರೊಬ್ಬರು ಕುಡಿದು ಶಾಲೆಗೆ ಬಂದಾಗ ಹತಾಶೆಗೊಂಡ ಮಕ್ಕಳು ಚಪ್ಪಲಿ ಎಸೆದು ಓಡಿಸಿದ್ದಾರೆ. ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.