ಛತ್ತೀಸ್ ಗಢ: ಮುಸ್ಲಿಮರೊಂದಿಗೆ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸುವುದಿಲ್ಲ ಎಂದು ಸಂಘಪರಿವಾರದ ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ಶಪಥ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ.
ಈ ವೀಡಿಯೋ ಛತ್ತೀಸ್ ಗಢದ ಸುರ್ಗುಜಾ ಎಂಬಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.
ಹಿಂದೂಗಳಾದ ನಾವು ಯಾವುದೇ ಮುಸ್ಲಿಮರ ಅಂಗಡಿಯವರಿಂದ ಸರಕು ಸಾಮಗ್ರಿಗಳ ಖರೀದಿ, ಭೂಮಿಯ ಮಾರಾಟ ಮತ್ತು ಖರೀದಿಗಳನ್ನು ಮಾಡುವುದಿಲ್ಲ ಎಂದು ಹೇಳುತ್ತಾ ಪ್ರತಿಜ್ಞೆ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.