ಕಣ್ಣೂರು (ಕೇರಳ): SDPI ಪಕ್ಷದ ಧ್ವಜ ಎಂದು ಭಾವಿಸಿ ಪೋರ್ಚುಗಲ್’ನ ಧ್ವಜವನ್ನು ಕಿತ್ತುಹಾಕಿದ ವಿಲಕ್ಷಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾಟ ಸದ್ಯದಲ್ಲೇ ನಡೆಯಲಿದ್ದು, ಪೋರ್ಚುಗಲ್ ತಂಡಕ್ಕೆ ಬೆಂಬಲ ಸೂಚಿಸಿ ಕೆಲವು ಕೇರಳದ ಯುವಕರು ಆ ತಂಡದ ಧ್ವಜವನ್ನು ಅಳವಡಿಸಿದ್ದರು. ಇದನ್ನು ನೋಡಿದ ಸಂಘಪರಿವಾರದ ಕಾರ್ಯಕರ್ತನೊಬ್ಬ ಈ ಧ್ವಜ SDPI ಪಕ್ಷಕ್ಕೆ ಸೇರಿದ್ದು ಎಂದು ಭಾವಿಸಿ, ಪೋರ್ಚುಗಲ್ ಧ್ವಜವನ್ನು ಕಿತ್ತುಹಾಕಿದ್ದಾನೆ.
ಧ್ವಜ ಕಿತ್ತುಹಾಕುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, SDPI ಪಕ್ಷದ ಧ್ವಜವೆಂದು ಭಾವಿಸಿ ಪೋರ್ಚುಗಲ್’ನ ಧ್ವಜವನ್ನು ಆಕ್ರೋಶದಿಂದ ಕಿತ್ತು ಹಾಕುತ್ತಿರುವ ದೃಶ್ಯಾವಳಿ ಸಖತ್ ವೈರಲ್ ಆಗುತ್ತಿದೆ.
ಸಂಘಪರಿವಾರದ ಕಾರ್ಯಕರ್ತನ ನಡೆಗೆ ನೆಟ್ಟಿಗರು ವ್ಯಂಗ್ಯ ಮತ್ತು ಆಕ್ರೋಶದ ಮೂಲಕ ಕಾಲೆಳೆದಿದ್ದಾರೆ.