Home ಟಾಪ್ ಸುದ್ದಿಗಳು ಎಸ್ ಡಿಪಿಐ ನಾಯಕ ಶಾನ್ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು

ಎಸ್ ಡಿಪಿಐ ನಾಯಕ ಶಾನ್ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು

ಕೊಚ್ಚಿ: ಎಸ್ಡಿಪಿಐ ಕೇರಳ ರಾಜ್ಯ ಕಾರ್ಯದರ್ಶಿ ಕೆ.ಎಸ್. ಶಾನ್ (38) ರ ಕೊಲೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ಎಂಟನೇ ಆರೋಪಿ ಚೇರ್ತಲ ನಿವಾಸಿ ಅಖಿಲ್ ಹಾಗೂ 12 ಮತ್ತು 13 ನೇ ಆರೋಪಿಗಳಾದ ಮತ್ತು ಮುಕುಂದಪುರಂ ನಿವಾಸಿಗಳಾದ ಸುಧೀಶ್ ಮತ್ತು ಸುಮೇಶ್ ಗೆ ಹೈಕೋರ್ಟ್ ಜಾಮೀನು ನೀಡಿದೆ. ಅವರು ಅಪರಾಧದಲ್ಲಿ ನೇರವಾಗಿ ಭಾಗಿಯಾಗಿಲ್ಲವೆಂದು ನ್ಯಾಯಾಲಯವು ಈ ನಡೆಯನ್ನು ಸ್ವೀಕರಿಸಿದೆ. ಆರೋಪಿಗಳ ವಿರುದ್ಧ ಜಾಮೀನು ಮಂಜೂರಾಗುವ ಪ್ರಕರಣಗಳ ಆರೋಪ ಹೊರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಎರಡರಿಂದ ಆರು ಆರೋಪಿಗಳಿಗೆ ಆಂಬ್ಯುಲೆನ್ಸ್ ಮೂಲಕ ಸ್ಥಳದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪವನ್ನು ಅಖಿಲ್ ಎಂಬಾತನ ಮೇಲೆ ದಾಖಲಿಸಲಾಗಿತ್ತು. ತಲೆಮರೆಸಿಕೊಳ್ಳಲು ಆಶ್ರಯ ನೀಡಲಾಗಿದೆ ಎಂಬ ಆರೋಪವನ್ನು ಸುಧೀಶ್ ಮತ್ತು ಸುಮೇಶ್ ನ ವಿರುದ್ಧ ದಾಖಲಿಸಲಾಗಿತ್ತು. ಆದರೆ ಪೊಲೀಸರು ಆರೋಪಿಗಳನ್ನು ಅವರು ತಲೆಮರೆಸಿಕೊಂಡಿದ್ದರು ಎಂದು ಹೇಳಿರುವ ಸ್ಥಳದಿಂದ ಕರೆದೊಯ್ಯಲಿಲ್ಲ. ಮಾತ್ರವಲ್ಲ ಆ ಮೂರು ಮಂದಿ ಆರ್ ಎಸ್ ಎಸ್ ಕಾರ್ಯಕರ್ತರು ಎಂಬ ಕಾರಣದಿಂದ ಮಾತ್ರ ಆರೋಪವನ್ನು ಹೊರಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

Join Whatsapp
Exit mobile version