ಚಾರ್ಮಿನಾರ್ ಬಳಿ 500 ರ ನೋಟಿನ ಮಳೆ | ಬೆರಗಾದ ನೆಟ್ಟಿಗರು

Prasthutha: June 22, 2022

ಹೈದರಾಬಾದ್: ಗುಲ್ಜಾರ್ ಹೌಸ್ ಚಾರ್ಮಿನಾರ್‌ನಲ್ಲಿ ನಿನ್ನೆ ತಡರಾತ್ರಿ 500 ರೂ. ನೋಟಿನ ಮಳೆ ಸುರಿದಿದೆ. ಮದುವೆ ಮೆರವಣಿಗೆಯಲ್ಲಿ ವ್ಯಕ್ತಿಯೊಬ್ಬ 500 ರೂ ನೋಟುಗಳನ್ನು ಗಾಳಿಯಲ್ಲಿ ಹಾರಿಸಿ ನೋಡುಗರನ್ನು ನಿಬ್ಬೆರಗಾಗಿಸಿದ್ದಾನೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿದೆ. ಮದುವೆಗೆ ಬಂದಿದ್ದ ಅತಿಥಿಯೊಬ್ಬ ಈ ರೀತಿ 500ರ ನೋಟುಗಳನ್ನು ಹಾರಿಬಿಟ್ಟಿದ್ದಾನೆ. ತನಗಾದ ಸಂತೋಷವನ್ನು ವ್ಯಕ್ತಪಡಿಸಲು ಆತ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.

ಮದುವೆ ಮೆರವಣಿಗೆಯಲ್ಲಿ ಬಿಳಿಯ ಜುಬ್ಬಾ ಧರಿಸಿದ್ದ ವ್ಯಕ್ತಿ 500 ರೂಪಾಯಿಯ ನೂರಾರು ನೋಟುಗಳನ್ನು ಹಾರಿಸಿಬಿಟ್ಟಿದ್ದಾನೆ. ಈ ವಿಡಿಯೋ ನೋಡಿದವರಿಗೆಲ್ಲ ಅಚ್ಚರಿಯೋ ಅಚ್ಚರಿ.

ಕೇವಲ 30 ಸೆಕೆಂಡುಗಳ ವಿಡಿಯೋ ಇದು. ಹಣವನ್ನು ಗಾಳಿಯಲ್ಲಿ ತೂರಿ ಆತ ಹೊರಟಿರುವುದು ಸೆರೆಯಾಗಿದೆ. ಈ ರೀತಿ ನೋಟಿನ ಮಳೆ ಸುರಿಸಿದವನ ಬಳಿ ಅದೆಷ್ಟು ಹಣವಿರಬಹುದು ಅನ್ನೋ ಆಲೋಚನೆ ಒಂದು ಕಡೆಯಾದರೆ, ಆ ಸ್ಥಳದಲ್ಲಿ ನಾವೂ ಇದ್ದರೆ ನಮಗೂ ಗರಿ ಗರಿ ನೋಟು ಸಿಗುತ್ತಿತ್ತಲ್ಲ ಅಂತ ಹಲವರು ಚಿಂತಿಸುವವರು ಮತ್ತೊಂದು ಕಡೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!